ಕರ್ನಾಟಕ

karnataka

ETV Bharat / bharat

ಸಾವರ್ಕರ್ ಬಗ್ಗೆ ಬಿಜೆಪಿಗಿರುವುದು ನಕಲಿ ಪ್ರೀತಿ, ತೋರಿಕೆಯ ಗೌರವ: ಶಿವಸೇನೆ ಟೀಕೆ - ಬಿಜೆಪಿಯ ನಿಲುವು ಖಂಡಿಸಿದ ಶಿವ ಸೇನೆ

ವೀರ ಸಾವರ್ಕರ್​ ಬಿಜೆಪಿ ಪಾಲಿಗೆ ರಾಜಕೀಯ, ಹಿಂದುತ್ವದ ಅಸ್ತ್ರವೇ ಹೊರತು ಗೌರವದ ಪ್ರತೀಕವಲ್ಲ ಎಂದು ಶಿವ ಸೇನೆ ಗುರುವಾರ ಬಿಜೆಪಿ ನಿಲುವನ್ನು ತೀವ್ರವಾಗಿ ಖಂಡಿಸಿದೆ.

BJP using Savarkar as shield for neo-nationalism politics:Sena
ಬಿಜೆಪಿ ವೀರ್ ಸಾವರ್ಕರ್ ಅವರನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದೆ: ಶಿವಸೇನೆ

By

Published : Feb 27, 2020, 2:26 PM IST

ಮುಂಬೈ(ಮಹಾರಾಷ್ಟ್ರ): ವೀರ ಸಾವರ್ಕರ್​ ಬಿಜೆಪಿ ಪಾಲಿಗೆ ರಾಜಕೀಯ, ಹಿಂದುತ್ವದ ಅಸ್ತ್ರವೇ ಹೊರತು ಗೌರವದ ಪ್ರತೀಕವಲ್ಲ ಎಂದು ಶಿವ ಸೇನೆ ಗುರುವಾರ ಬಿಜೆಪಿ ನಿಲುವನ್ನು ತೀವ್ರವಾಗಿ ಖಂಡಿಸಿದೆ.

ಸಾವರ್ಕರ್​ ಎಡಗೆ ಬಿಜೆಪಿಗಿರುವುದು ನಕಲಿ ಪ್ರೀತಿ, ತೋರಿಕೆ ಗೌರವ ಅಷ್ಟೇ. ಬಿಜೆಪಿಗರು ರಾಜ್ಯ ರಾಜಕರಣವನ್ನು ಪ್ರಶ್ನೆ ಮಾಡುವ ಮೊದಲು ರಾಷ್ಟ್ರ ಹೋರಾಟಗಾರ ಸಾವರ್ಕರ್​ ಗೆ ಪುರಸ್ಕಾರ ನೀಡಿ ಗೌರವಿಸದ ಕೇಂದ್ರ ಆಡಳಿತವನ್ನು ಪ್ರಶ್ನಿಸಲಿ. ಸಾವರ್ಕರ್​ ವಿಚಾರವಾಗಿ ಶಿವ ಸೇನೆಯನ್ನು ಮೂಲೆಗುಂಪು ಮಾಡಬಹುದು ಎಂದುಕೊಂಡಿದ್ದರೆ ಅದು ಬಿಜೆಪಿಯ ತಪ್ಪು ತಿಳಿವಳಿಕೆ ಅಷ್ಟೇ ಎಂದಿದೆ.

ತಮ್ಮನ್ನು ತಾವು ದೇಶಭಕ್ತರು ಎಂದು ಕರೆದುಕೊಳ್ಳುವ ಪಕ್ಷಗಳು 2002 ವರೆಗೂ ತ್ರಿವರ್ಣ ದ್ವಜವನ್ನೂ ಹಾರಿಸದೇ ಹೋಗಿದ್ದವು. ಆಗ ನಮ್ಮ ಪಕ್ಷ, ಶಿವ ಸೇನೆಯ ಪ್ರತೀಕ ಕೇಸರಿ ಧ್ವಜದೊಂದಿಗೆ ತಿರಂಗವನ್ನೂ ಹಾರಿಸಿತ್ತು ಎಂದು ಉಲ್ಲೇಖಿಸಿದೆ.

ABOUT THE AUTHOR

...view details