ಕರ್ನಾಟಕ

karnataka

ETV Bharat / bharat

ಲಂಚ ಸ್ವೀಕರಿಸುವಾಗ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಬಿಜೆಪಿ ಕೌನ್ಸಿಲರ್​ ಉಚ್ಚಾಟನೆ! - ಬಿಜೆಪಿ ಕೌನ್ಸಿಲರ್ ಬಂಧಿಸಿದ ಸಿಬಿಐ

ಸಿಬಿಐ ಬಂಧಿಸಿರುವ ಪುರಸಭೆ ಸದಸ್ಯನನ್ನು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ್ದಾರೆ. ಪ್ರಾಥಮಿಕ ವಿಚಾರಣಾ ವರದಿ ಬಂದ ಕೂಡಲೇ ಕೌನ್ಸಿಲರ್ ಮನೋಜ್ ಮಹ್ಲಾವತ್ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ತಿಳಿಸಿದ್ದಾರೆ.

Manoj Mehlawat,
ಮನೋಜ್ ಮಹ್ಲಾವತ್

By

Published : Dec 5, 2020, 5:27 PM IST

ನವದೆಹಲಿ: ದೆಹಲಿಯಲ್ಲಿ 10 ಲಕ್ಷ ರೂ. ಲಂಚ ಪ್ರಕರಣದಲ್ಲಿ ಬಂಧಿತನಾಗಿರುವ ಬಿಜೆಪಿಯ ಕೌನ್ಸಿಲರ್​ ಅವರನ್ನು ಪಕ್ಷ ಉಚ್ಚಾಟನೆ ಮಾಡಿದೆ.

ಸಿಬಿಐ ಬಂಧಿಸಿರುವ ಪುರಸಭೆ ಸದಸ್ಯರನ್ನು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದ್ದಾರೆ. ಪ್ರಾಥಮಿಕ ವಿಚಾರಣಾ ವರದಿ ಬಂದ ಕೂಡಲೇ ಕೌನ್ಸಿಲರ್ ಮನೋಜ್ ಮಹ್ಲಾವತ್ ಅವರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ತಿಳಿಸಿದ್ದಾರೆ.

ಪಕ್ಷವು ಭ್ರಷ್ಟಾಚಾರದ ಬಗ್ಗೆ ಸಹಿಷ್ಣುತೆ ತೋರುವುದಿಲ್ಲ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ 10 ಲಕ್ಷ ರೂ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ಅಡಿಯಲ್ಲಿ ವಸಂತ್ ಕುಂಜ್‌ನ ಕೌನ್ಸಿಲರ್ ಮನೋಜ್ ಮೆಹ್ಲಾವತ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2023ಕ್ಕೆ​​ ಸರ್ಕಾರ ರಚನೆ ಮಾಡೋಕೆ ಕೆಸಿಆರ್​ಗೆ ಆಗಲ್ಲ: ಕಿಶನ್​ ರೆಡ್ಡಿ

ಯಾವುದೇ ಅಡೆತಡೆಯಿಲ್ಲದೆ ಮನೆ ನಿರ್ಮಿಸಲು ಅನುಮತಿ ನೀಡಲು ಲಂಚ ಕೋರಿದ್ದರು. ಲಂಚ ಸ್ವೀಕರಿಸುತ್ತಿದ್ದಾಗ ಏಜೆನ್ಸಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಬಂಧಿತ ಕೌನ್ಸಿಲರ್ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್​ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ಹೇಳಿದರು.

ABOUT THE AUTHOR

...view details