ನವದೆಹಲಿ:ಬಿಜೆಪಿ ದೇಶದಲ್ಲಿ ಪೂರ್ವಗ್ರಹ ಪೀಡಿತ ಕೋಮು ದ್ವೇಷದ ವೈರಸ್ ಹರಡುತ್ತಿದ್ದು ದೇಶಕ್ಕೆ ಗಂಭೀರ ಹಾನಿ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಬಿಜೆಪಿ ಪೂರ್ವಗ್ರಹ ಪೀಡಿತ ಕೋಮು ದ್ವೇಷದ ವೈರಸ್ ಹರಡುತ್ತಿದೆ.. ಸೋನಿಯಾ ಗಾಂಧಿ ಆರೋಪ - ಸೋನಿಯಾ ಗಾಂಧಿ ಲೇಟೆಸ್ಟ್ ನ್ಯೂಸ್
ದೇಶದಲ್ಲಿ ಭಾರತೀಯ ಜನತಾ ಪಾರ್ಟಿ ದ್ವೇಷದ ವೈರಸ್ ಬಿತ್ತುತ್ತಿದ್ದು, ಅದನ್ನು ಸರಿಪಡಿಸಲು ನಾವೆಲ್ಲ ಶ್ರಮಿಸಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಸೋನಿಯಾ, ಈ ಬಗ್ಗೆ ಪ್ರತಿಯೊಬ್ಬ ಭಾರತೀಯನು ಚಿಂತಿಸಬೇಕಾಗಿದೆ. ಅಲ್ಲದೆ ಈ ಹಾನಿಯನ್ನು ಸರಿಪಡಿಸಲು ಕಾಂಗ್ರೆಸ್ ಶ್ರಮಿಸಬೇಕಾಗುತ್ತದೆ ಎಂದಿದ್ದಾರೆ.
'ಪ್ರತಿಯೊಬ್ಬ ಭಾರತೀಯರು ಯೋಚಿಸಬೇಕಾದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಾವು ಕೊರೊನಾ ವೈರಸ್ ಅನ್ನು ಒಗ್ಗಟ್ಟಿನಿಂದ ಎದುರಿಸುತ್ತಿರುವಾಗ ಬಿಜೆಪಿ, ಪೂರ್ವಾಗ್ರಹ ಪೀಡಿತ ಕೋಮು ದ್ವೇಷದ ವೈರಸ್ ಹರಡುತ್ತಿದೆ' ಎಂದಿದ್ದಾರೆ. ನಮ್ಮ ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಹಾನಿಯಾಗುತ್ತಿದೆ. ನಾವು ಮತ್ತು ನಮ್ಮ ಪಕ್ಷ ಈ ಹಾನಿಯನ್ನು ಸರಿಪಡಿಸಲು ಶ್ರಮಿಸಬೇಕಾಗಿದೆ ಎಂದು ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಹಿರಿಯ ನಾಯಕರು ಭಾಗವಹಿಸಿದ್ದರು.