ಕರ್ನಾಟಕ

karnataka

ETV Bharat / bharat

ಟಿಕ್​ ಟಾಕ್​ ಸ್ಟಾರ್​ಗೆ ಬಿಜೆಪಿ ಟಿಕೆಟ್​​! - ಹರಿಯಾಣದ ಆದಂಪುರ ಕ್ಷೇತ್ರ

ಹರಿಯಾಣ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಸೋನಾಲಿ ಪೋಗಟ್ ಟಿಕ್​ ಟಾಕ್ ಸಾಕಷ್ಟು ವೈರಲ್ ಆಗುತ್ತಿವೆ.

ಟಿಕ್​ಟಾಕ್​ ಸ್ಟಾರ್​ ಬಿಜೆಪಿ ಚುನಾವಣಾ ಅಭ್ಯರ್ಥಿ

By

Published : Oct 3, 2019, 4:45 PM IST

ಆದಂಪುರ​(ಹರಿಯಾಣ):ಹರಿಯಾಣ ವಿಧಾನಸಭೆ ಚುನಾವಣೆಗೆ ಜನಪ್ರಿಯ ಟಿಕ್​ ಟಾಕ್ ಸ್ಟಾರ್ ಸೋನಾಲಿ ಪೋಗಟ್​ಗೆ ಬಿಜೆಪಿ ಟಿಕೆಟ್ ನೀಡಿದೆ.

ಹರಿಯಾಣದ ಆದಂಪುರ ಕ್ಷೇತ್ರದಿಂದ ಸೋನಾಲಿ ಕಣಕ್ಕಿಳಿದಿದ್ದು, ಕಾಂಗ್ರೆಸ್​ನಿಂದ ಕುಲ್ದೀಪ್ ಬಿಶ್ನೋಯ್ ಎದುರಾಳಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತ ಕೊಂಚ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಗ್ಲಾಮರ್ ಟಚ್ ನೀಡಿದೆ.

ಹರಿಯಾಣ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಸೋನಾಲಿ ಪೋಗಟ್ ಟಿಕ್​ ಟಾಕ್ ಸಾಕಷ್ಟು ವೈರಲ್ ಆಗುತ್ತಿವೆ.

1969ರಲ್ಲಿ ಆದಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದು, 1969ರಿಂದ ಭಜನ್​ ಲಾಲ್ ಎಂಟು ಬಾರಿ ಗೆಲುಸು ಸಾಧಿಸಿದ್ದರು. ನಂತರ ಭಜನ್​ ಲಾಲ್ ಪತ್ನಿ ಜಸ್ಮಾ ದೇವಿ ಹಾಗೂ ಪುತ್ರ ಕುಲ್ದೀಪ್ ಬಿಶ್ನೋಯ್ ಕ್ರಮವಾಗಿ 1987 ಹಾಗೂ 1998ರಲ್ಲಿ ಗೆಲುವು ಕಂಡಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಕುಲ್ದೀಪ್ ಬಿಶ್ನೋಯ್

90 ಸ್ಥಾನಗಳಿರುವ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದೆ.

ABOUT THE AUTHOR

...view details