ಕರ್ನಾಟಕ

karnataka

ETV Bharat / bharat

ಬಿಜೆಪಿ 2- 3ನೇ ಪಟ್ಟಿ ರಿಲೀಸ್​​, ಪಕ್ಷದ ವಿರುದ್ಧ ಮಾತನಾಡಿದ ಸಿನ್ಹಾಗೆ ಕೊಕ್​! - ಸಮಿತ್​ ಪಾತ್ರಾ

ಲೋಕಸಭೆ ಫೈಟ್​ಗಾಗಿ ಭಾರತೀಯ ಜನತಾ ಪಾರ್ಟಿ ಮತ್ತೆರೆಡು ಪಟ್ಟಿ ರಿಲೀಸ್ ಮಾಡಿದೆ. ಈ ಹಿಂದೆ ಬಿಜೆಪಿ ಫೈರ್​ ಬ್ರ್ಯಾಂಡ್​ ಶತೃಘ್ನ ಸಿನ್ಹಾ ಕಣಕ್ಕಿಳಿಯುತ್ತಿದ್ದ ಪಾಟ್ನಾ ಸಾಹೇಬ್​ ಕ್ಷೇತ್ರದಿಂದ ರವಿಶಂಕರ್​ ಪ್ರಸಾದ್​ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.

ಬಿಜೆಪಿ

By

Published : Mar 23, 2019, 5:45 PM IST

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಕಳೆದೆರಡು ದಿನಗಳ ಹಿಂದೆ 184 ಅಭ್ಯರ್ಥಿಗಳ ಫಸ್ಟ್​ ಲಿಸ್ಟ್​ ರಿಲೀಸ್ ಮಾಡಿದ್ದ ಬಿಜೆಪಿ ನಿನ್ನೆ ತಡರಾತ್ರಿ ಹಾಗೂ ಇಂದು ಮತ್ತೆರೆಡು ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಗಳಲ್ಲಿ ಒಟ್ಟು 47 ಅಭ್ಯರ್ಥಿಗಳ ಮಾಹಿತಿ ಇದೆ.

2ನೇ ಲಿಸ್ಟ್​​ನಲ್ಲಿ 36 ಅಭ್ಯರ್ಥಿಗಳು ಹಾಗೂ ಮೂರನೇ ಲಿಸ್ಟ್​ನಲ್ಲಿ 11ಅಭ್ಯರ್ಥಿಗಳಿದ್ದಾರೆ. 36 ಅಭ್ಯರ್ಥಿಗಳ ಲಿಸ್ಟ್​ನಲ್ಲಿ ಆಂಧ್ರಪ್ರದೇಶದ 23 ಅಭ್ಯರ್ಥಿ,ಮಹಾರಾಷ್ಟ್ರ 6 ಅಭ್ಯರ್ಥಿಗಳು,ಒಡಿಶಾದಿಂದ 5 ಅಭ್ಯರ್ಥಿಗಳು, ಆಸ್ಸೋಂ ಹಾಗೂ ಮೇಘಾಲಯದ ತಲಾ 1ಅಭ್ಯರ್ಥಿಗಳ ಲಿಸ್ಟ್​ ಇದಾಗಿದೆ. ನಂತರದ ಲಿಸ್ಟ್​​ನಲ್ಲಿ ತೆಲಂಗಾಣದ 6 ಅಭ್ಯರ್ಥಿಗಳು, ಉತ್ತರಪ್ರದೇಶದ 3, ಕೇರಳ ಹಾಗೂ ಪಶ್ಚಿಮ ಬಂಗಾಳದ ತಲಾ 1ಅಭ್ಯರ್ಥಿಗಳಿದ್ದಾರೆ.

ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಮಿತ್​ ಪಾತ್ರಾ ಒಡಿಶಾದ ಪುರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಬಿಜೆಪಿಯ ಶತೃಘ್ನ ಸಿನ್ಹಾ ಸ್ಪರ್ಧೆ ಮಾಡುತ್ತಿದ್ದ ಬಿಹಾರದ ಪಾಟ್ನಾ ಸಾಹೇಬ್​ ಕ್ಷೇತ್ರದಿಂದ ರವಿಶಂಕರ್​ ಪ್ರಸಾದ್​ ಕಣಕ್ಕಿಳಿಯುತ್ತಿದ್ದಾರೆ.

ABOUT THE AUTHOR

...view details