ನವದೆಹಲಿ:ಪಾಲ್ಘರ್ ಘಟನೆಯನ್ನಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಮೂವರನ್ನು ಕಳ್ಳರೆಂದು ಭಾವಿಸಿ ಅನುಮಾನದ ಮೇಲೆ ಒಂದಿಷ್ಟು ಜನ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
ಗೊಂದಲದ ಕ್ಷಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಪಾಲ್ಘರ್ ಕುರಿತು ಕಾಂಗ್ರೆಸ್ ಟೀಕೆ - ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆ
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮೂವರನ್ನು ಕಳ್ಳರೆಂದು ಭಾವಿಸಿ, ಸ್ಥಳೀಯರು. ಈ ಘಟನೆಯನ್ನು ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ಪಾಲ್ಘರ್ ಕುರಿತು ಕಾಂಗ್ರೆಸ್ ಟೀಕೆ
ಏಪ್ರಿಲ್ 16 ರ ರಾತ್ರಿ, ಗುಜರಾತ್‌ನ ಸೂರತ್‌ಗೆ ತೆರಳುತ್ತಿದ್ದ ಮೂವರನ್ನು ಮುಂಬೈ ನಿವಾಸಿಗಳು ಕಳ್ಳರೆಂಬ ಅನುಮಾನದ ಮೇಲೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡಚಿಂಚಲೆ ಗ್ರಾಮದಲ್ಲಿ ಸ್ಥಳೀಯ ನಿವಾಸಿಗಳು ಕೊಂದಿದ್ದಾರೆ.
"ನನ್ನ ಪ್ರಕಾರ ಸಮಾಜದಲ್ಲಿ ಬಹಳ ಗೊಂದಲದ ಸಂದರ್ಭ ನಿರ್ಮಾಣವಾದಗ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ" ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.