ಕರ್ನಾಟಕ

karnataka

By

Published : Aug 10, 2020, 11:43 AM IST

ETV Bharat / bharat

'ಜನಸಂಖ್ಯಾ ನಿಯಂತ್ರಣ ಮಸೂದೆ' ಮಂಡಿಸಿ: ಮೋದಿಗೆ ಬಿಜೆಪಿ ಸಂಸದನ ಒತ್ತಾಯ

ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಚೀನಾವನ್ನು ಭಾರತ ಶೀಘ್ರದಲ್ಲೇ ಹಿಂದಿಕ್ಕಲ್ಲಿದೆ. ಹೀಗಾಗಿ ಮುಂಬರುವ ಸಂಸತ್​ ಅಧಿವೇಶನದಲ್ಲಿ ಪರಿಣಾಮಕಾರಿ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಮಂಡಿಸುವಂತೆ ಒತ್ತಾಯಿಸಿ ಬಿಜೆಪಿ ಸಂಸದ ​ಅನಿಲ್​ ಅಗರ್ವಾಲ್ ಪಿಎಂ ಮೋದಿಗೆ ಪತ್ರ ಬರೆದಿದ್ದಾರೆ.

BJP MP urges Modi to table Population Control Bill in Parliament
ಮೋದಿ

ನವದೆಹಲಿ: ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಮುಂಬರುವ ಸಂಸತ್​ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡುವಂತೆ ಬಿಜೆಪಿ ರಾಜ್ಯಸಭಾ ಸಂಸದ ​ಅನಿಲ್​ ಅಗರ್ವಾಲ್​ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.

ಪಿಎಂ ಮೋದಿಗೆ ಬರೆದ ಪತ್ರದಲ್ಲಿ 'ಜನಸಂಖ್ಯಾ ಸ್ಫೋಟ' ವಿಚಾರವನ್ನು ಪರಿಶೀಲಿಸಬೇಕಾಗಿದೆ. ಭಾರತವನ್ನು 'ಆತ್ಮನಿರ್ಭರ' ಅಥವಾ ಸ್ವಾವಲಂಬಿ ದೇಶವನ್ನಾಗಿ ಮಾಡುವ ಏಕೈಕ ಮಾರ್ಗವೆಂದರೆ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತರುವುದು. ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ. ಪ್ರತಿಯೊಂದು ಸಮುದಾಯವೂ, ಪ್ರತಿಯೊಬ್ಬರೂ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಬಯಸುತ್ತಾರೆ. ಈ ಕಾನೂನು ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಅನಿಲ್​ ಅಗರ್ವಾಲ್ ಉಲ್ಲೇಖಿಸಿದ್ದಾರೆ.

ಮೋದಿಗೆ ​ಅನಿಲ್​ ಅಗರ್ವಾಲ್ ಪತ್ರ

ಭಾರತದ ಜನಸಂಖ್ಯಾ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದ್ದು, ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಚೀನಾವನ್ನು ಭಾರತ ಶೀಘ್ರದಲ್ಲೇ ಹಿಂದಿಕ್ಕಲ್ಲಿದೆ. 2019 ರ ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡಿದ್ದೀರಿ. ಈಗ ಸಮಯ ಬಂದಿದೆ. ಮುಂಬರುವ ಸಂಸತ್​ ಅಧಿವೇಶನದಲ್ಲಿ ಪರಿಣಾಮಕಾರಿ ಜನಸಂಖ್ಯಾ ನಿಯಂತ್ರಣ ಮಸೂದೆ ಮಂಡಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ಸಂಸದರು ಪಿಎಂ ಮೋದಿ ಬಳಿ ಮನವಿ ಮಾಡಿದ್ದಾರೆ.

ABOUT THE AUTHOR

...view details