ಕರ್ನಾಟಕ

karnataka

ETV Bharat / bharat

ವಿದೇಶದಿಂದ ಮರಳಿ ಸ್ವ-ಇಚ್ಛೆಯಿಂದ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಸಂಸದ

ಇತ್ತೀಚೆಗೆ ಸೌದಿ ಅರೇಬಿಯಾದಿಂದ ಮರಳಿ ಕೊರೊನಾ ವೈರಸ್​ ಟೆಸ್ಟ್​ನಲ್ಲಿ ನೆಗೆಟಿವ್​ ಬಂದಿದ್ದರೂ, ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್​ ಪ್ರಭು ಸ್ವ-ಇಚ್ಛೆಯಿಂದ ಹೊರಗಿನ ಸಂಪರ್ಕದಿಂದ ಪ್ರತ್ಯೇಕವಾಗಿದ್ದಾರೆ. ಮುಂದಿನ 14 ದಿನಗಳ ಕಾಲ ತಮ್ಮ ನಿವಾಸದಲ್ಲೇ ಐಸೋಲೇಷನ್​ನಲ್ಲಿ ಪ್ರಭು ಇರಲಿದ್ದಾರೆ.

BJP MP Suresh Prabhu
ಸುರೇಶ್​ ಪ್ರಭು

By

Published : Mar 18, 2020, 12:30 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ಹರಡುವ ಭೀತಿಯಿಂದಾಗಿ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಸುರೇಶ್​ ಪ್ರಭು ಸ್ವ-ಇಚ್ಛೆಯಿಂದ ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಹೊರಗಿನ ಸಂಪರ್ಕದಿಂದ ಪ್ರತ್ಯೇಕವಾಗಿದ್ದಾರೆ.

ಸೌದಿ ಆರೇಬಿಯಾ ಪ್ರವಾಸದಿಂದ ಮರಳಿರುವ ಪ್ರಭುಗೆ ಕೊರೊನಾ ನೆಗೆಟಿವ್​ ಇದ್ದರೂ, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಸ್ವ-ಇಚ್ಛೆಯಿಂದ ಐಸೋಲೇಷನ್​ನಲ್ಲಿದ್ದಾರೆ. ಮಹಾಮಾರಿ ಕೊರೊನಾ ಹರಡುವ ಸಾಧ್ಯತೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಯ ಸಂದೇಶಗಳು ರವಾನೆಯಾಗುತ್ತಿವೆ. ಜೊತೆಗೆ ಜನರಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಲಾಗುತ್ತಿದೆ.

ಈಗಾಗಲೇ ವಿದೇಶದಿಂದ ಮರಳಿರುವ ಹಲವರಲ್ಲಿ ಕೊರೊನಾ ಪಾಸಿಟಿವ್​ ಪತ್ತೆಯಾಗಿದ್ದು, ಹೀಗಾಗಿ ಸುರೇಶ್ ಪ್ರಭು ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ 14 ದಿನಗಳವರೆಗೆ ಪ್ರಭು ತಮ್ಮ ನಿವಾಸದಲ್ಲೇ ಐಸೋಲೇಷನ್​ನಲ್ಲಿ ಇರಲಿದ್ದಾರೆ.

ABOUT THE AUTHOR

...view details