ಕರ್ನಾಟಕ

karnataka

ETV Bharat / bharat

ಪಾಕ್​ ನಂಬರ್​ನಿಂದ ಬಿಜೆಪಿ ಸಂಸದರಿಗೆ ಬೆದರಿಕೆ ಕರೆ - ಸಂಸದ ಸಾಕ್ಷಿ ಮಹಾರಾಜ್

ನನ್ನ ಮನೆ ಜೊತೆ ನನ್ನನ್ನೂ ಸ್ಫೋಟಿಸುವುದಾಗಿ ಪಾಕ್​​ನ ನಂಬರ್​ನಿಂದ ಬೆದರಿಕೆ ಕರೆ ಬಂದಿದೆ ಎಂದು ಸಂಸದ ಸಾಕ್ಷಿ ಮಹಾರಾಜ್ ಅವರು ಲಿಖಿತ ದೂರು ನೀಡಿದ್ದಾರೆ.

ಪಾಕ್​ ನಂಬರ್​ನಿಂದ ಬಿಜೆಪಿ ಸಂಸದರಿಗೆ ಬೆದರಿಕೆ ಕರೆ
ಪಾಕ್​ ನಂಬರ್​ನಿಂದ ಬಿಜೆಪಿ ಸಂಸದರಿಗೆ ಬೆದರಿಕೆ ಕರೆ

By

Published : Aug 11, 2020, 4:21 PM IST

ಉನ್ನಾವೋ: ಬಾಂಬ್ ಸ್ಫೋಟಿಸಿ ನನ್ನನ್ನು ಕೊಲೆ ಮಾಡುವುದಾಗಿ ಪಾಕಿಸ್ತಾನದ ನಂಬರ್​​ನಿಂದ ಕರೆ ಬಂದಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ದೂರು ದಾಖಲಿಸಿದ್ದಾರೆ.

ಪಾಕ್​ನ ಉಗ್ರ ಸಂಘಟನೆಗಳಿಂದ ನನಗೆ ಎರಡು ಕರೆ ಬಂದಿದ್ದು, ನನ್ನ ಮನೆ ಜೊತೆ ನನ್ನನ್ನೂ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಉನ್ನಾವೋ ಸಂಸದರು ದೂರು ನೀಡಿದ್ದಾರೆ.

ಶೀಘ್ರದಲ್ಲಿ ಕಾಶ್ಮೀರವು ಪಾಕ್​ನ ಭಾಗವಾಗಲಿದೆ. ಅಯೋಧ್ಯೆಯ ರಾಮ ಮಂದಿರ ಭೂಮಿ ಪೂಜೆಯ ಕುರಿತು ಕೆಟ್ಟದಾಗಿ ಮಾತನಾಡಿದ್ದಾನೆ. ಜೊತೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾನೆ. ನಾನು ಮತ್ತು ನನ್ನ ಮುಜಾಹಿದ್ದೀನ್ ಸಂಘಟನೆಯವರು ನಿನ್ನ ಮೇಲೆ ಗುರಿ ಇಟ್ಟಿದ್ದೇವೆ ಎಂದು ಕರೆ ಮಾಡಿದವ ಬೆದರಿಕೆ ನೀಡಿದ್ದಾನೆ ಎಂದು ಸಂಸದರು ದೂರಿದ್ದಾರೆ.

ನನ್ನ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಸರು ಆಗ್ರಹಿಸಿದ್ದಾರೆ. ಸಂಸದರ ದೂರಿನ ಮೇರೆಗೆ ಎಸ್​ಪಿ ರೋಹನ್ ಅವರು ಮಾತನಾಡಿ, ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆಗೆ ಆದೇಶಿಸಿದ್ದೇನೆ. ಈಗಾಗಲೇ ಸಂಸದರಿಗೆ ಭದ್ರತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details