ಭೋಪಾಲ್: ಎರಡು ದಿನಗಳ ಹಿಂದೆ ಅಧಿವೇಶನದಲ್ಲಿ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿದ್ದ ಭೋಪಾಲ್ನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದಾದ ಬಳಿಕ ಅವರು ಖುದ್ದಾಗಿ ಸದನದಲ್ಲಿ ಕ್ಷಮೆಯಾಚನೆ ಸಹ ಮಾಡಿದ್ದರು.
ಕಾಂಗ್ರೆಸ್ ಶಾಸಕನಿಗೆ ಪ್ರಗ್ಯಾ ಸಿಂಗ್ ತಿರುಗೇಟು... ಧೈರ್ಯವಿದ್ದರೆ ಜೀವಂತ ಸುಡಿ ಎಂದ ಸಂಸದೆ! - ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್
ನಾಥೂರಾಮ್ ಗೋಡ್ಸೆಯನ್ನು 'ದೇಶಭಕ್ತ' ಎಂದು ಹೇಳಿಕೆ ನೀಡಿದ್ದ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಕಾಂಗ್ರೆಸ್ ಶಾಸಕ ವಿವಾದಿತ ಹೇಳಿಕೆ ನೀಡಿದ್ದು, ಇದೀಗ ಅದಕ್ಕೆ ತಿರುಗೇಟು ನೀಡಿ ಬಿಜೆಪಿ ಸಂಸದೆ ಟ್ವೀಟ್ ಮಾಡಿದ್ದಾರೆ.
ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಗೋವರ್ಧನ್ ದಾಂಗಿ ಮಾತನಾಡಿ, ಒಂದು ವೇಳೆ ಪ್ರಗ್ಯಾ ಸಿಂಗ್ ಮಧ್ಯಪ್ರದೇಶದ ಬ್ಯಾವರ್ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟರೆ ಜೀವಂತವಾಗಿ ದಹನ ಮಾಡುತ್ತೇವೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಇದೀಗ ಟ್ವೀಟ್ ಮೂಲಕ ಟಾಂಗ್ ನೀಡಿರುವ ಬಿಜೆಪಿ ಸಂಸದೆ, ನಾನು ರಾಜಗಢ ಜಿಲ್ಲೆಯ ಬ್ಯಾವರ್ಗೆ ಡಿಸೆಂಬರ್ 8ರಂದು ಸಂಜೆ ಬರುತ್ತಿದ್ದೇನೆ. ಧೈರ್ಯವಿದ್ರೆ ನನ್ನನ್ನು ದಹನ ಮಾಡಿ ಎಂದು ಹೇಳಿದ್ದಾರೆ. ಜತೆಗೆ ಕಾಂಗ್ರೆಸ್ನವರು ಬೆಂಕಿ ಹಚ್ಚುವಲ್ಲಿ ನಿಸ್ಸೀಮರು. ಅವರಿಗೆ ಧೈರ್ಯವಿದ್ದರೆ ಈ ಕೆಲಸ ಮಾಡಲಿ ಎಂದಿದ್ದಾರೆ.