ನವದೆಹಲಿ:"ಭಾರತವನ್ನು ವಿಶ್ವದ ಅತ್ಯಾಚಾರದ ರಾಜಧಾನಿ ಎನ್ನಲಾಗುತ್ತಿದೆ" ಎಂದ ಎಐಸಿಸಿ ಮಾಜಿ ಅದ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ಸಂಸದ ಮನೋಜ್ ತಿವಾರಿ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ, ಎಂದಿಗೂ ಭಾರತವನ್ನು ಹೆಮ್ಮೆಯ ದೇಶವನ್ನಾಗಿ ನೋಡಲು ಅಥವಾ ಮಾಡಲು ಸಾಧ್ಯವಿಲ್ಲ. ಇದೀಗ ಮತ್ತೆ ಅವರನ್ನು 'ಬುದ್ಧಿಮಾಂದ್ಯ'ರಂತೆ ನೋಡುವಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಧಾನ ಮಂತ್ರಿ ವಿರುದ್ಧ ತಪ್ಪು ಪದಗಳನ್ನು ಬಳಸಿ ಮಾತನಾಡಿದ್ದರು, ಈ ಕುರಿತು ನ್ಯಾಯಾಲಯದಲ್ಲಿ ಕ್ಷಮೆಯಾಚಿಸಬೇಕಾಗಿತ್ತು ಎಂದು ಇದೇ ವೇಳೆ ಹೇಳಿದರು.
ಭಾರತವನ್ನು ವಿಶ್ವದ ಅತ್ಯಾಚಾರಗಳ ರಾಜಧಾನಿ ಎನ್ನಲಾಗುತ್ತಿದೆ. ತನ್ನ ನೆಲದ ಹೆಣ್ಣುಮಕ್ಕಳನ್ನು ನೋಡಿಕೊಳ್ಳಲು ಭಾರತಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ವಿದೇಶಿ ರಾಷ್ಟ್ರಗಳು ಪ್ರಶ್ನಿಸುತ್ತಿವೆ ಎಂದು ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.