ಕರ್ನಾಟಕ

karnataka

ETV Bharat / bharat

ಕನಿಕಾ ಭಾಗಿಯಾದ ಪಾರ್ಟಿಯಲ್ಲಿ ದುಶ್ಯಂತ್​... ಮೇರಿ ಕೋಮ್, ಹೇಮಾ ಮಾಲಿನಿ, ರಾಷ್ಟ್ರಪತಿ ಸೇರಿ ಅನೇಕರ ಭೇಟಿ - ಬಿಜೆಪಿ ಸಂಸದ ದುಶ್ಯಂತ್​ ಸಿಂಗ್

ಬಾಲಿವುಡ್​ ಸಿಂಗರ್​ ಕನಿಕಾ ಕಪೂರ್​ ಭಾಗಿಯಾಗಿದ್ದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ ದುಶ್ಯಂತ್​ ಭಾಗಿಯಾಗಿದ್ದು, ತದನಂತರ ಅನೇಕರ ಭೇಟಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

BJP MP Dushyant Singh
BJP MP Dushyant Singh

By

Published : Mar 21, 2020, 5:15 AM IST

ನವದೆಹಲಿ:ಬಾಲಿವುಡ್​ ಸಿಂಗ್​​ ಕನಿಕಾ ಕಪೂರ್​ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ದುಶ್ಯಂತ್​ ಸಿಂಗ್​ ರಾಜೇ ಭಾಗಿಯಾಗಿದ್ದು ಈಗಾಗಲೇ ಕನ್ಫರ್ಮ್​ ಆಗಿದೆ. ಇದರ ಬೆನ್ನಲ್ಲೇ ಕೆಲವೊಂದು ಮಹತ್ವದ ಅಂಶಗಳು ಹೊರಬೀಳಲು ಆರಂಭಗೊಂಡಿವೆ.

ಪಾರ್ಟಿಯಲ್ಲಿ ಭಾಗಿಯಾಗಿದ್ದ ದುಶ್ಯಂತ್​ ಸಿಂಗ್​ ರಾಜೇ ತದನಂತರ ಸಂಸತ್ತಿಗೆ ಹಾಜರಾಗಿದ್ದರು. ಈ ವೇಳೆ ಅನೇಕ ಸಂಸದರನ್ನ ಭೇಟಿ ಮಾಡಿರುವ ಅವರು, ಇದಾದ ಬಳಿಕ ರಾಷ್ಟ್ರಪತಿ ಭೇಟಿ ಮಾಡಿದ್ದರು. ಇದೇ ವೇಳೆ ಕೇಂದ್ರ ಸಚಿವ ರಾಜವರ್ಧನ್​ ರಾಥೋಡ್​, ಸಂಸದೆ ಹೇಮಾ ಮಾಲಿನಿ, ಸಚಿವರಾದ ಅರ್ಜುಲ್​ ರಾಮ್​ ಮೇಘವಾಲ್​ ಹಾಗೂ ಬಾಕ್ಸರ್​ ಮೇರಿ ಕೋಮ್​ ಸೇರಿದಂತೆ ಅನೇಕರ ಭೇಟಿ ಮಾಡಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ತೃಣಮೂಲ ಕಾಂಗ್ರೆಸ್​ನ ಡೆರಿಕ್​ ಓಬ್ರೀನ್​​ ನಾನು ಒಂದು ದಿನ ದುಶ್ಯಂತ್​ ಪಕ್ಕದಲ್ಲಿ ಎರಡೂವರೆ ಗಂಟೆ ಕುಳಿತಿದ್ದೆ ಎಂದು ಟ್ವೀಟ್​ ಮಾಡಿದ್ದಾರೆ. ತಮಗೆ ವಿಷಯ ತಿಳಿಯುತ್ತಿದ್ದಂತೆ ಮೆನ್ನೆಚ್ಚರಿಕೆ ಕ್ರಮವಾಗಿ ನಾನು ಮತ್ತು ನನ್ನ ಮಗ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details