ಭೋಪಾಲ್: ಕರ್ನಾಟಕದಲ್ಲಿ ಹಲವು ಪ್ರಯತ್ನಗಳ ಬಳಿಕ ಆಪರೇಷನ್ ಕಮಲ ಯಶಸ್ವಿಯಾಗಿ ಬಿಎಸ್ವೈ ಸರ್ಕಾರ ರಚನೆ ಆಗಿದೆ. ಈಗ ಅಂತಹುದೇ ಯತ್ನ ಮಧ್ಯಪ್ರದೇಶದಲ್ಲಿ ಆರಂಭವಾಗಿದೆ. ಒಂದಿಷ್ಟು ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎಂಬ ಗುಸು ಗುಸು ಎದ್ದಿದೆ.
ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಆಪರೇಷನ್ ಹಸ್ತ - ಕಮಲ! - ಆಪರೇಷನ್ ಕಮಲ
ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ಭಾರಿ ಹೈಡ್ರಾಮ ನಡೆಯುತ್ತಿದ್ದು, ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಸ್ ನಡೆಸುತ್ತಿದೆ.

ಈ ನಡುವೆ ಓರ್ವ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೂಡಾ ಕೊಟ್ಟಿದ್ದಾರೆ. ಇದರ ಮಧ್ಯೆ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸಹ ರಿವರ್ಸ್ ಆಪರೇಷನ್ ಶುರು ಮಾಡಿದ್ದಾರೆ. ಬಿಜೆಪಿ ಎಂಎಲ್ಎ ನಾರಾಯಣ ತ್ರಿಪಾಠಿ ಸಿಎಂ ಕಮಲನಾಥ್ಗೆ ಬೆಂಬಲ ನೀಡುವ ಇರಾದೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಇನ್ನಿಬ್ಬರು ಎಂಎಲ್ಎಗಳು ಸಹ ಕಮಲನಾಥ್ಗೆ ಬೆಂಬಲ ನೀಡುವ ಮಾತನಾಡಿದ್ದಾರೆ. ಈ ಮಾತಿಗೆ ಇಂಬು ನೀಡುವಂತೆ ತ್ರಿಪಾಠಿ ಸಿಎಂ ಕಮಲನಾಥ್ ಅವರೊಂದಿಗೆ ನಿನ್ನೆ ರಾತ್ರಿ ಮಹತ್ವದ ಸಭೆ ನಡೆಸಿದ್ದಾರೆ.
ಅಷ್ಟೇ ಅಲ್ಲ ಅವರು ಸ್ಪೀಕರ್ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ಈ ಸುದ್ದಿಯನ್ನ ತ್ರಿಪಾಠಿ ತಳ್ಳಿ ಹಾಕಿದ್ದಾರೆ. ಇನ್ನೊಂದು ಕಡೆ ಇಬ್ಬರು ಸ್ವತಂತ್ರ( ಪಕ್ಷೇತರ)ಸದಸ್ಯರು ಸರ್ಕಾರಕ್ಕೆ ನೀಡಿರುವ ಬೆಂಬಲ ಮುಂದುವರೆಸುವುದಾಗಿ ಹೇಳಿದ್ದಾರೆ. ಇನ್ನು ಬೆಂಗಳೂರಿನಲ್ಲಿದ್ದಾರೆ ಎನ್ನಲಾದ ನಾಲ್ವರು ಕಾಂಗ್ರೆಸ್ ಎಂಎಲ್ಎಗಳ ಪೈಕಿ ಒಬ್ಬ ಎಂಎಲ್ಎ ಶ್ರೇರಾ ತಾವು ಸಿಲಿಕಾನ್ ಸಿಟಿಯಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ತಾವು ಸಿಎಂ ಕಮಲನಾಥ್ಗೆ ಬೆಂಬಲ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದಾರೆ. ಆದರೆ ಮೂವರು ಶಾಸಕರ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.