ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದ ಹಂಗಾಮಿ ಸ್ಪೀಕರ್​ ಆಗಿ ಬಿಜೆಪಿಯ ಕಾಳಿದಾಸ್: ನಾಳೆಯಿಂದ ವಿಶೇಷ ಅಧಿವೇಶನ - ಬಿಜೆಪಿಯ ಕಾಳಿದಾಸ್​​ ಕೋಲಾಂಬ್ಕರ್​​

ಮಹಾರಾಷ್ಟ್ರದ ರಾಜಕೀಯ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಶಿವಸೇನೆಯ ಉದ್ದವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಗಾದಿಗೇರಲು ಸಜ್ಜಾಗಿದ್ದಾರೆ.

BJP MLA Kalidas Kolambkar
ಹಂಗಾಮಿ ಸ್ಪೀಕರ್​ ಆಗಿ ಬಿಜೆಪಿ ಕಾಳಿದಾಸ್

By

Published : Nov 26, 2019, 5:59 PM IST

ಮುಂಬೈ:ದಿಢೀರ್​ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನವೀಸ್​ ಬಹುಮತವಿಲ್ಲದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮಹಾರಾಷ್ಟ್ರದ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ನೂತನ ಸಿಎಂ ಆಗಿ ಶಿವಸೇನೆಯ ಮುಖಂಡ ಉದ್ಧವ್ ಠಾಕ್ರೆ ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಮಧ್ಯೆ ರಾಜ್ಯಪಾಲರು Pro Tem ಸ್ಪೀಕರ್‌ ಆಯ್ಕೆ ಮಾಡಿದ್ದಾರೆ.

ಬಿಜೆಪಿಯ ಕಾಳಿದಾಸ್​​ ಕೋಲಾಂಬ್ಕರ್​​ ಅವರನ್ನು ಹಂಗಾಮಿ ಸ್ಪೀಕರ್​ (Pro Tem) ಆಗಿ ರಾಜ್ಯಪಾಲರು ನೇಮಕ ಮಾಡಿದ್ದಾರೆ. ಈಗಾಗಲೇ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಅವರು ನಾಳೆ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಕಾಳಿದಾಸ್​ ಕೋಲಾಂಬ್ಕರ್​ 8 ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ABOUT THE AUTHOR

...view details