ರಾಜಕೋಟ್(ಗುಜರಾತ್):ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಇದೀಗ ಅಪರಾಧವಾಗಿದ್ದು, ದಂಡ ಕಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ. ಅದರೆ ರೀತಿ ತಪ್ಪು ಮಾಡಿದ್ದ ಬಿಜೆಪಿ ಶಾಸಕರೇ ಈಗ ದಂಡ ಕಟ್ಟಿದ್ದಾರೆ.
ಹುಷಾರ್.. ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ: ಮಾಡಿದ ತಪ್ಪಿಗೆ ದಂಡ ಕಟ್ಟಿದ ಬಿಜೆಪಿ ಶಾಸಕ
ದೇಶದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಇದರ ಮಧ್ಯೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅಪರಾಧವಾಗಿದೆ.
BJP MLA Arvind Raiyani
ಬಿಜೆಪಿ ಶಾಸಕ ಅರವಿಂದ್ ರೈಯಾನಿ ದಂಡ ಕಟ್ಟಿರುವ ಎಂಎಲ್ಎ ಆಗಿದ್ದಾರೆ. ಸಾರ್ವಜನಿಕ ಸ್ಥಳ ಸಮುದಾಯ ಕಿಚನ್ನಲ್ಲಿ ಇವರು ಉಗುಳಿದ್ದ ವಿಡಿಯೋ ವೈರಲ್ ಆಗಿತ್ತು. ಹಾಗಾಗಿ 500 ರೂ ದಂಡ ಕಟ್ಟಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿರುವ ಶಾಸಕ, ನಾನು ನನ್ನ ಸ್ವಂತ ಆಸ್ತಿಯಲ್ಲಿ ಉಗುಳಿದ್ದು, ಅದು ಸಾರ್ವಜನಿಕ ಆಸ್ತಿ ಅಲ್ಲ. ಆದರೆ, ನಾನು ಮಾಡಿರುವುದು ತಪ್ಪು ಎಂದಿರುವ ಅವರು 500 ರೂ ದಂಡ ಕಟ್ಟಿದ್ದಾರೆ.
ದೇಶಾದ್ಯಂತ ಲಾಕ್ಡೌನ್ ವಿಸ್ತರಣೆ ಮಾಡಿ ಆದೇಶ ಹೊರಹಾಕಿರುವ ಕೇಂದ್ರ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕೂಡ ಅಪರಾಧ ಎಂದು ಹೇಳಿದೆ.