ಹೈದರಾಬಾದ್:ದೇಶದಲ್ಲಿ ಕೊರೊನಾ ವೈರಸ್ ಸಮುದಾಯದಕ್ಕೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜಸ್ಥಾನದ ಬಿಜೆಪಿ ಸಚಿವ ಅರ್ಜುನ್ ರಾಮ್ ಮೇಘವಾಲ್ 'ಕ್ರಿಪ್ಸ್ ಡ್ರಗ್'(crisp drug)ನನ್ನು ಬಿಡುಗಡೆ ಗೊಳಿಸಿದ್ದಾರೆ. ಇದು ಭಾರತೀಯ ಮನೆಗಳಲ್ಲಿನ ಒಂದು ಭಕ್ಷ್ಯವಾದ ಹಪ್ಪಳ ಹೊರತುಪಡಿಸಿ ಬೇರೆನೂ ಅಲ್ಲ.
"ಭಾಭಿಜಿ ಪಾಪಡ್" ಕೊರೊನಾಗೆ ಲಸಿಕೆ ಎಂದ ಬಿಜೆಪಿ ರಾಜಸ್ಥಾನ ಸಚಿವ - ಪಾಪಡ್ ಬ್ರಾಂಡ್
ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು “ಭಾಭಿಜಿ ಪಾಪಡ್” ಎಂಬ ಬ್ರಾಂಡ್ ಹಪ್ಪಳವನ್ನು ಬಿಡುಗಡೆಗೊಳಿಸಿದ್ದು, ಇದು ಕೋವಿಡ್-19 ವಿರುದ್ಧ ಹೋರಾಡಲು ಅಗತ್ಯವಾದ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಸಚಿವರ ಪ್ರಕಾರ, "ಭಾಭಿಜಿ ಪಾಪಡ್" ಎಂಬ ಪಾಪಡ್ ಬ್ರಾಂಡ್ ಕೊರೊನಾ ವೈರಸ್ ವಿರುದ್ಧ ಹೋರಾಡಲು ಅಗತ್ಯವಾದ ಪ್ರತಿಕಾಯಗಳನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ. ಸಚಿವರು ಈ ಒಂದು ಸಂಶೋಧನೆ ಎಲ್ಲರ ನಗೆಪಾಟಲಿಗೆ ಕಾರಣವಾಗಿದೆ. ಏಕೆಂದರೆ ಪಾಪಡ್ ಒಂದು ಆಹಾರ ಪದಾರ್ಥವಾಗಿದೆ. ಇದು ಎಲ್ಲ ಕಡೆ ಲಭ್ಯವಿರುತ್ತದೆ ಮತ್ತು ಎಲ್ಲರಿಗೂ ಕೈಗೆಟುಕುತ್ತದೆ.
ಸ್ಥಳೀಯ ಪಾಪಡ್ ತಯಾರಕರು ಪ್ರತಿಕಾಯಗಳ ರಚನೆಗೆ ಸಹಾಯ ಮಾಡುವ ಉತ್ಪನ್ನದೊಂದಿಗೆ ಬಂದಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಪ್ಪಳ ತುಂಬಾ ಉಪಯುಕ್ತ ಎಂದು ಸಚಿವ ಮೇಘವಾಲ್ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಗಂಟೆಗಳಲ್ಲಿ ವೈರಲ್ ಆದ ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ.