ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಿಜೆಪಿ ಸೋಲಿಗೆ ಪಕ್ಷದ ನಾಯಕರು ನೀಡಿರುವ ಪ್ರಚೋದನಕಾರಿ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಇದೇ ಮೊದಲ ಬಾರಿಗೆ ಆ ಕುರಿತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಚೋದನಾಕಾರಿ ಹೇಳಿಕೆಗಳಿಂದ ಬಿಜೆಪಿ ದೂರ ಇರಬೇಕಿತ್ತು. ಮುಂದೆ ಇಂತಹ ತಪ್ಪುಗಳಾದಂತೆ ಎಚ್ಚರ ವಹಿಸುತ್ತೇವೆ ಎಂದರು.
ಸೋಲಿಗೆ ಕಾರಣಗಳು?
- ಸಿಎಎ ವಿರೋಧಿಸಿ ಶಾಹೀನ್ ಬಾಗ್ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರನ್ನು ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಗೋಲಿಮಾರ್ ಎಂಬ ಹೇಳಿಕೆ ನೀಡಿದ್ದರು.
- ಅಲ್ಲದೆ, ಕಪಿಲ್ ಮಿಶ್ರಾ ಅವರು ಶಾಹೀನ್ಬಾಗ್ ಪ್ರತಿಭಟನೆಯನ್ನು ಮಿನಿ-ಪಾಕಿಸ್ತಾನ ಎಂದು ಕರೆದಿದ್ದರು.
- ಪ್ರತಿಭಟನಾಕಾರರು ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಅತ್ಯಾಚಾರ ಎಸಗಿ ಕೊಲ್ಲುತ್ತಾರೆ ಎಂದು ಪಶ್ಚಿಮ ದೆಹಲಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದರು. ಬಳಿಕ ಚುನಾವಣಾ ಆಯೋಗ ಅವರ ಪ್ರಚಾರಗಳಿಗೆ ನಿಷೇಧ ಹೇರಿತ್ತು.