ಕರ್ನಾಟಕ

karnataka

ETV Bharat / bharat

ಅಧಿಕಾರಿಗೆ ಚಪ್ಪಲಿಯಿಂದ ಥಳಿಸಿದ ಬಿಜೆಪಿ ನಾಯಕಿ ಸೋನಾಲಿ ಪೊಗಾಟ್​ ಬಂಧನ - ಬಿಜೆಪಿ ನಾಯಕಿ ಸೋನಾಲಿ

ಹರಿಯಾಣದ ಹಿಸಾರ್​ನ ಮಾರುಕಟ್ಟೆ ಸಮಿತಿಯ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ, ಚಪ್ಪಲಿಯಿಂದಲೂ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಸೋನಾಲಿ ಪೊಗಾಟ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

bjp leader sonali phogat
bjp leader sonali phogat

By

Published : Jun 17, 2020, 3:04 PM IST

ಹಿಸಾರ್​​(ಹರಿಯಾಣ): ಹರಿಯಾಣದ ಹಿಸಾರ್​​ನ ಮಾರುಕಟ್ಟೆ ಸಮಿತಿಯ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ, ಚಪ್ಪಲಿಯಿಂದ ಥಳಿಸಿದ್ದ ಬಿಜೆಪಿ ನಾಯಕಿ ಸೋನಾಲಿ ಪೊಗಾಟ್​​ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜೂನ್​ 5ರಂದು ಬಿಜೆಪಿ ನಾಯಕಿ ಹಾಗೂ ಟಿಕ್​ಟಾಕ್​ ತಾರೆ ಸೋನಾಲಿ ಪೊಗಾಟ್​​ ಮೇಲೆ ಹಲ್ಲೆ ಮಾಡಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಬಳಿಕ ಅವರ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣವನ್ನು ಸಿಐಡಿ ತನಿಖೆಗೊಳಪಡಿಸುವಂತೆ ಸಿಎಂ ಸೂಚನೆ ನೀಡಿದ್ದರು.

ಬಿಜೆಪಿ ನಾಯಕಿ ಸೋನಾಲಿ ಪೊಗಾಟ್​ ಅರೆಸ್ಟ್​!

ಇದೀಗ ಗಲಭೆ, ಸರ್ಕಾರಿ ನೌಕರನ ಕರ್ತವ್ಯ ಅಡ್ಡಿಪಡಿಸುವಿಕೆ ಹಾಗೂ ನಿಂದಿಸಿರುವ ಆರೋಪದಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. 2019ರಲ್ಲಿ ಹರಿಯಾಣದ ಆದಮ್​ಪುರ್​​ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇವರು ಸೋಲು ಕಂಡಿದ್ದರು.

ಘಟನೆಯ ಬಗ್ಗೆ ಮತ್ತಷ್ಟು ವಿವರ:

ಹಿಸಾರ್ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸುಲ್ತಾನ್​ ಸಿಂಗ್​ ತಮ್ಮ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆ ಎಂದು ಸೋನಾಲಿ ಪೊಗಾಟ್​ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು. ಮಾರುಕಟ್ಟೆಗೆ ಭೇಟಿ ನೀಡಿದ್ದ ವೇಳೆ ನಿಮ್ಮಂತಹ ಸುಂದರ ಚೆಲುವೆ, ಸ್ಟಾರ್​ ಈ ಉರಿ ಬಿಸಿಲಿನಲ್ಲಿ ಮಂಡಿಗೆ ಬರಬಾರದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಪೊಗಾಟ್​​ ಸುಲ್ತಾನ್​ ಸಿಂಗ್​ಗೆ ನಿಂದಿಸಿ ತದನಂತರ ಬಳಿಕ ಹಲ್ಲೆ ನಡೆಸಿದ್ದರು.

ABOUT THE AUTHOR

...view details