ಬಲ್ಲಿಯಾ:ಬಿಜೆಪಿ ಮುಖಂಡ ಅಧಿಕಾರಿಗಳ ಸಮ್ಮುಖದಲ್ಲೇ ಜನರತ್ತ ಗುಂಡು ಹಾರಿಸಿದ್ದು, ಈ ವೇಳೆ ವ್ಯಕ್ತಿಯೊಬ್ಬ ಗುಂಡೇಟಿಗೆ ಬಲಿಯಾಗಿರುವ ಘಟನೆ ದುರ್ಜಾಂಪುರ ಗ್ರಾಮದಲ್ಲಿ ನಡೆದಿದೆ.
ಪಡಿತರ ಅಂಗಡಿಗಳ ಆಯ್ಕೆಯ ಕುರಿತು ನಡೆದ ಸಭೆಯಲ್ಲಿ ಉಂಟಾದ ವಿವಾದದ ವೇಳೆ ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಬಿಜೆಪಿ ಮುಖಂಡ ಧೀರೇಂದ್ರ ಸಿಂಗ್ ಗುಂಪಿನತ್ತ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಧೀರೇಂದ್ರ ಸಿಂಗ್ ಐದರಿಂದ ಆರು ಗುಂಡುಗಳನ್ನು ಜನರ ಗುಂಪಿನತ್ತ ಹಾರಿಸಿದ್ದು, ಇದರಲ್ಲೊಂದು 46 ವರ್ಷದ ಜೈ ಪ್ರಕಾಶ್ಗೆ ತಗುಲಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಗಾಬರಿಗೊಳಗಾದ ಜನರು ದಿಕ್ಕಾಪಾಲಾಗಿದ್ದಾರೆ. ಈ ವೇಳೆ ಕಾಲುಳಿತ ಸಂಭವಿಸಿ ಸುಮಾರು 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇನ್ನು ಗುಂಡಿನ ದಾಳಿ ನಡೆಸಿದ ಬಿಜೆಪಿ ಮುಖಂಡ ಅಲ್ಲಿಂದ ಪರಾರಿಯಾಗಿದ್ದಾರೆ.