ನವದೆಹಲಿ:ಬಿಜೆಪಿ ನಿಜವಾದ 'ತುಕ್ಡೆ ತುಕ್ಡೆ ಗ್ಯಾಂಗ್' ಎಂದು ಆರೋಪಿಸಿರುವ ಕಾಂಗ್ರೆಸ್, ಕೇಸರಿ ಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು, ದೇಶದ ಏಕತೆಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದೆ.
ಬಿಜೆಪಿ ನಿಜವಾದ 'ತುಕ್ಡೆ ತುಕ್ಡೆ ಗ್ಯಾಂಗ್': ಪುನಿಯಾ ಶುಕ್ರವಾರ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಸಭೆ ಮುಗಿಸಿ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಎಲ್.ಪುನಿಯಾ, ಬಿಜೆಪಿ ಜನರನ್ನು ವಿಭಜಿಸುವ ರಾಜಕಾರಣದಲ್ಲಿ ತೊಡಗಿದೆ. ಈ ರೀತಿಯ ದ್ವೇಷದ ರಾಜಕರಣ ದೇಶಕ್ಕೆ ಒಳ್ಳೆಯದಲ್ಲ. ಜನರನ್ನು ಧಾರ್ಮಿಕ ಮತ್ತು ಸಾಮಾಜಿಕ ಆಧಾರದ ಮೇಲೆ ವಿಭಜಿಸಲು ಯತ್ನಿಸುತ್ತಿರುವ ಬಿಜೆಪಿ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್ ಎಂದರು.
ಇನ್ನು ಈ ಹಿಂದೆ ಕೇಂದ್ರದ ಮಾಜಿ ಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮಾತನಾಡಿ, ಸದ್ಯ ಅಧಿಕಾರದಲ್ಲಿರುವವರು ನಿಜವಾದ "ತುಕ್ಡೆ ತುಕ್ಡೆ" ಗ್ಯಾಂಗ್. ಆದರೆ, "ತುಕ್ಡೆ ತುಕ್ಡೆ ಗ್ಯಾಂಗ್" ಎನ್ನುವ ಪದವನ್ನು ಬಲಪಂಥೀಯರು, ಎಡಪಂಥೀಯರು ಮತ್ತು ಅವರ ಬೆಂಬಲಿಗರ ಮೇಲೆ ದಾಳಿ ಮಾಡಲು ಬಳಸುತ್ತಿದ್ದಾರೆ ಎಂದು ಹೇಳಿದ್ದರು.
ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಹೇಳಿಕೆಗೆ ಪ್ರತಿಕ್ರಿಯಿಸಿದ ಪುನಿಯಾ, ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಚುನಾವಣೆ ಎಂದು ಬಿಜೆಪಿ ಉಲ್ಲೇಖಿಸುತ್ತದೆ. ಇಂತಹ ಹೇಳಿಕೆಗಳ ಮೂಲಕ ಬಿಜೆಪಿ ನಾಯಕರು ಪ್ರಜ್ಞಾ ಶೂನ್ಯ ಟೀಕೆಗಳಿಗೆ ಹೆಸರುವಾಸಿಯಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.