ಕರ್ನಾಟಕ

karnataka

ETV Bharat / bharat

ದಿಗ್ವಿಜಯ್ ಸಿಂಗ್ ಒಬ್ಬಂಟಿಯಲ್ಲ, ಜೊತೆಗೆ ನಾನಿದ್ದೇನೆ: ಡಿ.ಕೆ.ಶಿವಕುಮಾರ್ - ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ದಿಗ್ವಿಜಯ್ ಸಿಂಗ್ ಒಬ್ಬಂಟಿಯಲ್ಲ, ಅವರಿಗೆ ಹೇಗೆ ಬೆಂಬಲ ನೀಡಬೇಕೆಂದು ನನಗೆ ಗೊತ್ತಿದೆ. ನಮ್ಮ ರಾಜಕೀಯ ತಂತ್ರವನ್ನು ಬಳಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

BJP govt in state is misusing the power,ಅವರು ಒಬ್ಬಂಟಿಯಲ್ಲ ನಾನಿದ್ದೇನೆ ಎಂದ ಡಿಕೆಶಿ
ಅವರು ಒಬ್ಬಂಟಿಯಲ್ಲ ನಾನಿದ್ದೇನೆ ಎಂದ ಡಿಕೆಶಿ

By

Published : Mar 18, 2020, 9:52 AM IST

ಬೆಂಗಳೂರು: ಮಧ್ಯಪ್ರದೇಶದ ಬಂಡಾಯ ಶಾಸಕರನ್ನು ಭೇಟಿ ಮಾಡಲು ಬಂದ ಕಾಂಗ್ರೆಸ್ ನಾಯಕ ದಿಗ್ವಿಜಯ್​ ಸಿಂಗ್ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿರುವ ಪೊಲೀಸರ ಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ.

ಮಾಧ್ಯಮವೊಂದರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗು ಮಾಜಿ ಸಚಿವ ಕೃಷ್ಣಭೈರೇಗೌಡ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ತಿದೆ. ಅವರ ಶಾಸಕರನ್ನು ಅವರು ಭೇಟಿ ಮಾಡುವುದರಲ್ಲಿ ತಪ್ಪೇನಿದೆ. ಅವರು ಮಾಡಿರುವ ಅಪರಾಧವಾದರೂ ಏನು ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ನಮ್ಮದೇ ಆದ ರಾಜಕೀಯ ತಂತ್ರವಿದೆ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ನಮಗೆ ತಿಳಿದಿದೆ. ಅವರು ಇಲ್ಲಿ ಒಬ್ಬಂಟಿಯಾಗಿಲ್ಲ, ನಾನು ಅವರ ಜೊತೆ ಇದ್ದೇನೆ. ಅವರನ್ನು ಹೇಗೆ ಬೆಂಬಲಿಸಬೇಕೆಂದು ನನಗೆ ತಿಳಿದಿದೆ. ಆದರೆ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವಂತಹ ಪರಿಸ್ಥಿತಿ ಸೃಷ್ಟಿಸಲು ನಾನು ಬಯಸುವುದಿಲ್ಲ ಎಂದಿದ್ದಾರೆ.

ಮಾಜಿ ಸಚಿವ ಕೃಷ್ಣ ಭೈರೇಗೌಡ ಕೂಡ ಬಿಜೆಪಿ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ. ದಿಗ್ವಿಜಯ್ ಸಿಂಗ್ ರಾಜ್ಯಸಭೆ ಅಭ್ಯರ್ಥಿಯಾಗಿ ಅವರ ಮತದಾರರಾದ ಶಾಸಕರನ್ನು ಭೇಟಿ ಮಾಡಲು ಬಂದಿದ್ದಾರೆ. ಅವರನ್ನು ಬಂಧಿಸುವ ಅವಶ್ಯಕತೆ ಏನಿತ್ತು? ಎಂದಿದ್ದಾರೆ.

ABOUT THE AUTHOR

...view details