ಕರ್ನಾಟಕ

karnataka

ETV Bharat / bharat

ರಾಜ್ಯಪಾಲರ ಭೇಟಿ ಮುಂದೂಡಿದ ಬಿಜೆಪಿ... 'ಮಹಾ' ಸರ್ಕಾರ ರಚನೆ ಇನ್ನೂ ಪ್ರಶ್ನಾರ್ಥಕ - ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ

ಒಂದೆಡೆ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್​ರನ್ನು ಭೇಟಿಯಾಗಲಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ

By

Published : Nov 7, 2019, 12:02 PM IST

ಮುಂಬೈ:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಗೊಂದಲ ಇನ್ನೂ ಮುಂದುವರೆದಿದ್ದು, ಇಂದು ಬಿಜೆಪಿ ನಿಯೋಗ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯನ್ನು ಭೇಟಿ ಮಾಡಲಿದೆ. ಇಂದು ಬೆಳಗ್ಗೆ 11.30 ನಿಗದಿಯಾಗಿದ್ದ ಈ ಭೇಟಿ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆಯಾಗಿದೆ.

ಒಂದೆಡೆ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದರೆ, ಇನ್ನೊಂದೆಡೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್​ರನ್ನು ಭೇಟಿಯಾಗಲಿದ್ದಾರೆ.

ಗಡ್ಕರಿ-ಭಾಗ್ವತ್ ಭೇಟಿಯಲ್ಲಿ ಸರ್ಕಾರ ರಚನೆ ಮತ್ತು ರಾಷ್ಟ್ರಪತಿ ಅಳ್ವಿಕೆಯ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಶಿವಸೇನೆ ಜೊತೆಗಿನ ಮೈತ್ರಿ ಸರ್ಕಾರದ ಬಗ್ಗೆಯೂ ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ.

ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ಬಿಜೆಪಿ ನಿಯೋಜಿತ ಸಿಎಂ ದೇವೇಂದ್ರ ಫಡ್ನವೀಸ್ ಆರೆಸ್ಸೆಸ್​ ಮುಖ್ಯಸ್ಥ ಮೋಹನ್ ಭಾಗ್ವತ್​ರನ್ನು ಭೇಟಿ ಮಾಡಿದ್ದರು.

ರೆಸಾರ್ಟ್​ ರಾಜಕಾರಣಕ್ಕೆ 'ಸೇನೆ' ಸ್ಪಷ್ಟನೆ:

ಶಿವಸೇನೆಯ ಶಾಸಕರನ್ನು ರೆಸಾರ್ಟ್​ಗೆ ಸ್ಥಳಾಂತರ ಮಾಡಲಾಗಿದೆ ಎನ್ನುವ ಸುದ್ದಿ ಭಾರಿ ಗುಲ್ಲೆಬ್ಬಿಸಿದೆ. ಈ ವಿಚಾರಕ್ಕೆ ಶಿವಸೇನೆ ಸಂಸದ ಸಂಜಯ್ ರಾವುತ್ ಸ್ಪಷ್ಟನೆ ನೀಡಿದ್ದಾರೆ.

ರೆಸಾರ್ಟ್​ ರಾಜಕಾರಣ ಮಾಡುವ ಅಗತ್ಯ ನಮಗಿಲ್ಲ. ನಮ್ಮೆಲ್ಲಾ ಶಾಸಕರು ಪಕ್ಷದ ಹಾಗೂ ಮುಖಂಡರ ಜೊತೆಗೆ ಉತ್ತಮವಾಗಿದ್ದಾರೆ. ರೆಸಾರ್ಟ್​ಗೆ ಸ್ಥಳಾಂತರ ಮಾಡುತ್ತಿದ್ದಾರೆ ಎನ್ನುವ ಸುಳ್ಳುಸುದ್ದಿ ಹಬ್ಬಿಸುವವರು ಅವರ ಶಾಸಕರ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ರಾವುತ್ ಹೇಳಿದ್ದಾರೆ.

ABOUT THE AUTHOR

...view details