ಕರ್ನಾಟಕ

karnataka

ETV Bharat / bharat

ಮಣಿಪುರ ಸಿಎಂ ವಿಶ್ವಾಸ ಮತಯಾಚನೆ: ಸಮ್ಮಿಶ್ರ ಸರ್ಕಾರದ ಭವಿಷ್ಯ ಇಂದು ನಿರ್ಧಾರ - ಮಣಿಪುರ ಸರ್ಕಾರದ ಭವಿಷ್ಯ ನಿರ್ಧಾರ

ಮೂವರು ಶಾಸಕರ ರಾಜೀನಾಮೆ ಮತ್ತು ಪಕ್ಷಾಂತರ ವಿರೋಧಿ ಕಾನೂನಿನಡಿ ನಾಲ್ಕು ಸದಸ್ಯರನ್ನು ಅನರ್ಹಗೊಳಿಸಿದ ನಂತರ ಇಂದು ಮಣಿಪುರ ವಿಧಾನಸಭೆ ವಿಶೇಷ ಅಧಿವೇಶನ ಕರೆದಿದ್ದು, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.

Manipur MLAs to participate in trust vote in Assembly
ಮಣಿಪುರ ಸಿಎಂ ವಿಶ್ವಾಸ ಮತಯಾಚನೆ

By

Published : Aug 10, 2020, 12:43 PM IST

ಇಂಫಾಲ: ಮಣಿಪುರದ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದ್ದು, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮಂಡಿಸಲಿರುವ ವಿಶ್ವಾಸ ನಿರ್ಣಯದ ಕುರಿತು ಶಾಸಕರು ಮತ ಚಲಾಯಿಸಲಿದ್ದಾರೆ.

ವಿಶ್ವಾಸ ಮತವು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕ್ರಮವಾಗಿ ತಮ್ಮ 18 ಮತ್ತು 24 ಶಾಸಕರಿಗೆ ನೋಟಿಸ್ ನೀಡಿದ್ದು, ವಿಧಾನಸಭೆಗೆ ಹಾಜರಾಗಿ ತಮ್ಮ ಪಕ್ಷದ ಪರ ಮತ ಚಲಾಯಿಸುವಂತೆ ಕೋರಿದ್ದಾರೆ.

ಮೂವರು ಶಾಸಕರ ರಾಜೀನಾಮೆ ಮತ್ತು ಪಕ್ಷಾಂತರ ವಿರೋಧಿ ಕಾನೂನಿನಡಿ ನಾಲ್ಕು ಸದಸ್ಯರನ್ನು ಅನರ್ಹಗೊಳಿಸಿದ ನಂತರ 60 ಸದಸ್ಯರ ಸದನದ ಒಟ್ಟು ಬಲ ಪ್ರಸ್ತುತ 53 ಆಗಿದೆ.

ಸದನದಲ್ಲಿ ಒಕ್ಕೂಟದ ಶಕ್ತಿ 29 ರಷ್ಟಿದ್ದರೂ 30ಕ್ಕೂ ಹೆಚ್ಚು ಸದಸ್ಯರ ಬೆಂಬಲವನ್ನು ಗಳಿಸುವ ಮೂಲಕ ಸರ್ಕಾರ ವಿಶ್ವಾಸ ಮತವನ್ನು ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಎಸ್.ಟಿಕೇಂದ್ರ ಸಿಂಗ್ ಹೇಳಿದ್ದಾರೆ.

ಜುಲೈ 28 ರಂದು ಕಾಂಗ್ರೆಸ್, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು.

ABOUT THE AUTHOR

...view details