ಪಾಟ್ನಾ: ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ವಿರುದ್ಧ ಬಿಹಾರ್ ಡಿಸಿಎಂ ಸಲ್ಲಿಸಿದ ಮಾನಹಾನಿ ಮೊಕದ್ದಮೆ ಕುರಿತು ಟ್ವಿಟರ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಬಿಜೆಪಿ, ಆರ್ಎಸ್ಎಸ್ ಬೆದರಿಕೆಗೆ ತಲೆ ಬಾಗೋ ಚಾನ್ಸೇ ಇಲ್ಲ: ರಾಹುಲ್ ಖಡಕ್ ತಿರುಗೇಟು - undefined
ಬಿಹಾರ್ ಡಿಸಿಎಂ ಸಲ್ಲಿಸಿದ್ದ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್ಎಸ್ಎಸ್ ನಡೆಗೆ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
![ಬಿಜೆಪಿ, ಆರ್ಎಸ್ಎಸ್ ಬೆದರಿಕೆಗೆ ತಲೆ ಬಾಗೋ ಚಾನ್ಸೇ ಇಲ್ಲ: ರಾಹುಲ್ ಖಡಕ್ ತಿರುಗೇಟು](https://etvbharatimages.akamaized.net/etvbharat/prod-images/768-512-3765545-thumbnail-3x2-rahul-.jpg)
ಚುನಾವಣೆ ಯಾತ್ರೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೆಪಣಾರ್ಹ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಡಿಸಿಎಂ ಸುಶೀಲ್ ಕುಮಾರ್ ಅವರು ದೂರು ಸಲ್ಲಿಸಿದ್ದರು. ಈ ಕುರಿತು ಇಂದು ಪಾಟ್ನಾ ಸಿವಿಲ್ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಬೆದರಿಕೆ ತಂತ್ರಕ್ಕೆ ತಾವು ಯಾವುದೇ ಸೊಪ್ಪು ಹಾಕಲ್ಲ ಎನ್ನುವ ಮೂಲಕ ಹೆದರುವ ಚಾನ್ಸೇ ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಮೊಕದ್ದಮೆ ವಿಚಾರಣೆಗೆ ಹಾಜರಾಗುವ ಮುನ್ನ ಟ್ವೀಟ್ ಮಾಡಿರುವ ಅವರು, ಬಿಜೆಪಿ ಮತ್ತು ಆರ್ಎಸ್ಎಸ್ ನಡೆಯನ್ನು ಖಂಡಿಸಿದ್ದಾರೆ. 'ಇಂದು 2 ಗಂಟೆಗೆ ಪಾಟ್ನಾ ಕೋರ್ಟ್ನ ವಿಚಾರಣೆಗೆ ಹಾಜರಾಗಲಿದ್ದೇನೆ. ನನ್ನ ರಾಜಕೀಯ ಎದುರಾಳಿ ಬಿಜೆಪಿ ಹಾಗೂ ಆರ್ಎಸ್ಎಸ್ ಕಿರುಕುಳ ಹಾಗೂ ಭೀತಿ ಹುಟ್ಟಿಸುವ ನಿಟ್ಟಿನಲ್ಲಿ ಕೇಸ್ ಮೇಲೆ ಕೇಸ್ ಜಡಿಯುತ್ತಿದ್ದಾರೆ. ಆದರೆ ನಾನು ಇದ್ಯಾವುದಕ್ಕೂ ಬಗ್ಗಲ್ಲ- ಜಗ್ಗಲ್ಲ ಎನ್ನುವ ಮೂಲಕ ಹೋರಾಟ ಮುಂದುವರೆಯುತ್ತೆ ಎಂಬ ವಾರ್ನಿಂಗ್ ರವಾನಿಸಿದ್ದಾರೆ.