ನವದೆಹಲಿ: ದೆಹಲಿ ಜನರು ಪ್ರತಿಪಕ್ಷ ಸ್ಥಾನದಲ್ಲಿ ಕೂರುವಂತೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಜನಾದೇಶ ನೀಡಿದ್ದಾರೆ. ಹೀಗಾಗಿ, ನಾವು ಜನಾದೇಶವನ್ನು ಸ್ವೀಕರಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.
ಜನಾದೇಶ ಕೊಟ್ಟ ತೀರ್ಪನ್ನು ಗೌರವಿಸುತ್ತೇವೆ: ಜೆಪಿ ನಡ್ಡಾ - ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ
ಸ್ಪಷ್ಟ ಬಹುಮತ ಪಡೆದು ಮತ್ತೆ ದೆಹಲಿಗೆ ಅಧಿಪತಿಯಾದ ಅರವಿಂದ್ ಕೇಜ್ರಿವಾಲ್ ಅವರಿಗೆ ಹಾಗೂ ಪಕ್ಷಕ್ಕೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅಭಿನಂದನೆ ಸಲ್ಲಿಸಿದರು.
ಜನಾದೇಶ ಕೊಟ್ಟ ತೀರ್ಪನ್ನು ಗೌರವಿಸುತ್ತೇವೆ
ಪ್ರತಿಪಕ್ಷದಲ್ಲಿ ಕೂತು ದೆಹಲಿ ಅಭಿವೃದ್ಧಿ ಕಾರ್ಯಗಳ ಕುರಿತು ಅಧ್ಯಯನ ನಡೆಸುವುದಲ್ಲದೇ, ಆಡಳಿತ ಪಕ್ಷದೊಂದಿಗೆ ಚರ್ಚಿಸುತ್ತೇವೆ. ಆಮ್ ಆದ್ಮಿ ಪಕ್ಷ ರಾಜ್ಯದ ಅಭಿವೃದ್ಧಿಗಾಗಿ ದುಡಿಯಲಿ ಎಂದು ತಿಳಿಸಿದರು.
ಸ್ಪಷ್ಟ ಬಹುಮತ ಪಡೆದು ಮತ್ತೆ ದೆಹಲಿಗೆ ಅಧಿಪತಿಯಾದ ಅರವಿಂದ್ ಕೇಜ್ರಿವಾಲ್ಗೆ ಅಭಿನಂದನೆ ಸಲ್ಲಿಸಿದ ಅವರು, ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಪಕ್ಷದ ಹಿತಕ್ಕಾಗಿ ಹಗಲು-ರಾತ್ರಿ ದುಡಿದರು. ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.