ನವದೆಹಲಿ: ಭಾರತ- ಚೀನಾ ನಡುವೆ ತೀವ್ರ ವಿವಾದದ ನೆಲೆಯಾದ ಪೂರ್ವ ಲಡಾಖ್ನ ಮೇಲ್ಭಾಗದಲ್ಲಿ ತಾಪಮಾನ ಮೈನಸ್ 30 ಡಿಗ್ರಿಗಿಂತಲೂ ಕೆಳಗಿಳಿಯುತ್ತಿದೆ. ಮೈಕೊರೆಯುವ ಭೀಕರ ಚಳಿಯ ನಡುವೆಯೂ ಉಭಯ ರಾಷ್ಟ್ರಗಳು ಭಾರಿ ಪ್ರಮಾಣ ಸೇನಾ ಸಿಬ್ಬಂದಿ ನಿಯೋಜನೆ ಮಾಡುವುದು ಬುದ್ಧಿವಂತಿಕೆಯಾಗಿ ಕಾಣುತ್ತಿಲ್ಲ. ಇದು ಎರಡೂ ರಾಷ್ಟ್ರಗಳ ಬೊಕ್ಕಸಕ್ಕೆ ದೊಡ್ಡ ಹೊರೆಯಾಗುತ್ತಿದೆ.
ಸುಮಾರು ಎಂಟು ತಿಂಗಳ ಹಿಂದೆ ಲಡಾಖ್ ಗಡಿಯಲ್ಲಿ ಕ್ಯಾತೆ ತೆಗೆದಿದ್ದ ಚೀನಾ, ಭಾರತ ತೀಕ್ಷ್ಣವಾಗಿ ಪ್ರತಿರೋಧ ನೀಡುತ್ತದೆ ಎಂಬುದನ್ನು ಕಮ್ಯೂನಿಸ್ಟ್ ರಾಷ್ಟ್ರ ನಿರೀಕ್ಷಿಸಿರಲಿಲ್ಲ. ಇದರಿಂದ ಭಾರತ ಗಡಿಯಲ್ಲಿ ಸಾಲು - ಸಾಲು ಭದ್ರತಾ ಪಡೆಗಳನ್ನು ಏಪ್ರಿಲ್-ಮೇ ತಿಂಗಳಿಂದ ಸನ್ನದ್ಧು ಮಾಡಿಕೊಂಡಿತು. ಇದರ ಪರಿಣಾಮವಾಗಿ ಭಾರತ ಮತ್ತು ಚೀನಾ ಹಿಮಾವೃತ ಗಡಿ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಸೈನಿಕರು ಮತ್ತು ಮಿಲಿಟರಿ ಪರಿಕರಗಳು ನಿಯೋಜಿತವಾಗಿವೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲದೇ ಎರಡೂ ಕಡೆಯ ಕಮಾಂಡರ್‌ಗಳ ಮಟ್ಟದಲ್ಲಿ ಈಗಿನ ಬದಲಾವಣೆಗೆ ಒಂದು ಅವಕಾಶವಿದೆ. ಲಡಾಖ್‌ನಲ್ಲಿ ಎಂಟು ತಿಂಗಳಿಂದ ನಡೆಯುತ್ತಿರುವ ಯುದ್ಧದ ವಾತಾವರಣವನ್ನು 'ಗೌರವಾನ್ವಿತ' ಮತ್ತು ಪರಸ್ಪರ ಮಾತುಕತೆ ಮುಖೇನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಬಹುದಾಗಿದೆ.