ಕರ್ನಾಟಕ

karnataka

ETV Bharat / bharat

ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರ ದೃಢ..! - Sanjay lake shut for visitors

ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರ ದೃಢಪಟ್ಟಿರುವುದಾಗಿ ದೆಹಲಿಯ ಪಶುಸಂಗೋಪನಾ ಇಲಾಖೆ ತಿಳಿಸಿದೆ.

Bird flu confirmed in Delhi after testing eight samples
ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರ ದೃಢ

By

Published : Jan 11, 2021, 11:30 AM IST

ನವದೆಹಲಿ: ಸತ್ತ ಕಾಗೆಗಳು ಹಾಗೂ ಬಾತುಕೋಳಿಗಳ ಮಾದರಿಗಳ ಪರೀಕ್ಷೆ ಮಾಡಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ ಎಂದು ದೆಹಲಿಯ ಪಶುಸಂಗೋಪನಾ ಇಲಾಖೆ ತಿಳಿಸಿದೆ. ಈ ಮೂಲಕ ಹಕ್ಕಿ ಜ್ವರ ದೃಢಪಡಿಸಿರುವ 9ನೇ ರಾಜ್ಯ ದೆಹಲಿಯಾಗಿದೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಗುಜರಾತ್ - ಎಂಟು ರಾಜ್ಯಗಳು ಈ ಹಿಂದೆ ತಮ್ಮ ರಾಜ್ಯಗಳಲ್ಲಿ ಪಕ್ಷಿಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವೆಂಬುದನ್ನು ಸ್ಪಷ್ಟಪಡಿಸಿದ್ದವು.

ಇದನ್ನೂ ಓದಿ - ಹಕ್ಕಿ ಜ್ವರದ ಭೀತಿ: ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ

ಪಕ್ಷಿಗಳ ಆಮದನ್ನು ದೆಹಲಿ ಸ್ಥಗಿತಗೊಳಿಸಿದ್ದು, ಗಾಜೀಪುರದಲ್ಲಿರುವ ಅತಿದೊಡ್ಡ ಕುಕ್ಕುಟೋದ್ಯಮ ಮಾರುಕಟ್ಟೆಯನ್ನು ಮುಚ್ಚಲಾಗಿದೆ. ನೂರಾರು ಬಾತುಕೋಳಿಗಳು ಮೃತಪಟ್ಟಿದ್ದು, ದ್ವಾರಕಾದಲ್ಲಿರುವ ಡಿಡಿಎ ಪಾರ್ಕ್ ಹಾಗೂ ಸಂಜಯ್​ ಸರೋವರಕ್ಕೆ ಸಾರ್ವಜನಿಕರ ಪ್ರವೇಶ ಸ್ಥಗಿತಗೊಳಿಸಲಾಗಿದೆ.

ಕಾಗೆಗಳ ಹಾಗೂ ಬಾತುಕೋಳಿಗಳ ಕಳೇಬರವನ್ನು ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಐಸಿಎಆರ್) ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಹಕ್ಕಿ ಜ್ವರದಿಂದಲೇ ಇವು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ABOUT THE AUTHOR

...view details