ಕರ್ನಾಟಕ

karnataka

ETV Bharat / bharat

ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ರಿಗೆ ಸೇನೆಯಿಂದ ಅದ್ದೂರಿ ಬೀಳ್ಕೊಡುಗೆ..

ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿನ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯು ಸಮರ್ಥವಾಗಿ ತಯಾರಾಗಿದೆ ಎಂದು ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದರು.

India’s first Chief of Defence Staff General Bipin Rawat
ಬಿಪಿನ್​ ರಾವತ್​ಗೆ ಸೇನೆಯಿಂದ ಅದ್ಧೂರಿ ಬೀಳ್ಕೊಡುಗೆ

By

Published : Dec 31, 2019, 12:02 PM IST

ನವದೆಹಲಿ:ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಇಂದು ತಮ್ಮ ಸೇವೆಯಿಂದ ನಿವೃತ್ತಿಯಾಗಿದ್ದಾರೆ. ದೆಹಲಿಯ ಸೌತ್‌ ಬ್ಲಾಕ್‌ನಲ್ಲಿ ಅವರಿಗೆ ಅದ್ದೂರಿ ಬೀಳ್ಕೊಡುಗೆ ನೀಡಲಾಯಿತು.

ಸೇನೆಯಿಂದ ಗೌರವವಂದನೆ ಸ್ವೀಕರಿಸಿದ ಬಳಿಕ ಮಾಧ್ಯಗಳೊಂದಿಗೆ ಮಾತನಾಡಿದ ಬಿಪಿನ್​ ರಾವತ್, ಕಠಿಣ ಸಂದರ್ಭಗಳಲ್ಲಿ ಸ್ಥಿರವಾಗಿ ನಿಂತು ಸವಾಲನ್ನು ಎದುರಿಸಿದ ಎಲ್ಲ ಭಾರತೀಯ ಸೈನ್ಯದ ಸೈನಿಕರಿಗೆ ಕೃತಜ್ಞತೆ ತಿಳಿಸುತ್ತೇನೆ. 28ನೇ ಭಾರತೀಯ ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುತ್ತಿರುವ ಲೆಫ್ಟಿನೆಂಟ್​ ಜನರಲ್​​ ಮನೋಜ್​ ಮುಕಂದ್​ ಅವರಿಗೂ ಅಭಿನಂದಿಸುವೆ ಎಂದರು.

ಇದೇ ವೇಳೆ ಮಾಧ್ಯಮ ಮಿತ್ರರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿನ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆಯು ಈಗ ಮತ್ತಷ್ಟು ಸರ್ಥವಾಗಿ ತಯಾರಾಗಿದೆ ಎಂದರು.

ಇತ್ತ ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿಗೊಳ್ಳುತ್ತಿದ್ದಂತೆ, ದೇಶದ ಮೂರು ಸೇನಾಪಡೆಗಳ (ಭೂ ಸೇನೆ, ವಾಯುಪಡೆ, ನೌಕಾ ಪಡೆ) ಮೊದಲ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅಧಿಕಾರವಹಿಸಿಕೊಳ್ಳಲಿದ್ದಾರೆ. ಇನ್ಮುಂದೆ ಅವರು ಚೀಫ್ ಆಫ್ ಡಿಫೆನ್ಸ್ ಸ್ಟಾಫ್​ ಆಗಿ ಕೆಲಸ ನಿರ್ವಹಿಸಲಿದ್ದಾರೆ.

For All Latest Updates

TAGGED:

ABOUT THE AUTHOR

...view details