ಮುಂಬೈ: ಮಹಾರಾಷ್ಟ್ರದಲ್ಲಿರುವ ಎಲ್ಲ ಶಾಲೆಗಳಲ್ಲಿ ಮರಾಠಿ ಭಾಷೆ ಕಡ್ಡಾಯಗೊಳಿಸಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಅಲ್ಲಿನ ವಿಧಾನಸಭೆಯಲ್ಲಿ ಬಿಲ್ ಪಾಸ್ ಮಾಡಲಾಗಿದೆ. ಸಚಿವ ಸುಭಾಷ್ ದೇಸಾಯಿ ವಿಧಾನಸಭೆಯಲ್ಲಿ ಬಿಲ್ ಮಂಡನೆ ಮಾಡಿದ್ದು, ಅದಕ್ಕೆ ಸರ್ವಾನುಮತದಿಂದ ಅಂಗೀಕಾರವೂ ದೊರೆತಿದೆ. ಬಿಲ್ ಪಾಸಾಗಿರುವ ಹಿನ್ನೆಲೆಯಲ್ಲಿ ಇನ್ಮುಂದೆ ಮಹಾರಾಷ್ಟ್ರದ ಎಲ್ಲ ಶಾಲೆಗಳಲ್ಲೂ ಮರಾಠಿ ಭಾಷೆ ಕಡ್ಡಾಯವಾಗಲಿದೆ.
ಮಹಾರಾಷ್ಟ್ರದ ಎಲ್ಲ ಶಾಲೆಗಳಲ್ಲಿ ಮರಾಠಿ ಕಡ್ಡಾಯ...ಅಸೆಂಬ್ಲಿಯಲ್ಲಿ ಬಿಲ್ ಪಾಸ್! - ಮಹಾರಾಷ್ಟ್ರದ ವಿಧಾನಸಭೆ
ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ಅಲ್ಲಿನ ಶಾಲೆಗಳಲ್ಲಿ ಮರಾಠಿ ಭಾಷೆ ಕಡ್ಡಾಯವಾಗಲಿದೆ.
Marathi language mandatory
ದಕ್ಷಿಣ ಭಾರತದ ರಾಜ್ಯಗಳಲ್ಲಿ ಈಗಾಗಲೇ 1ನೇ ತರಗತಿಯಿಂದ 10ನೇ ತರಗತಿ ಶಾಲೆಗಳಲ್ಲಿ ಸ್ಥಳೀಯ ಭಾಷೆಯನ್ನ ಕಡ್ಡಾಯಗೊಳಿಸಲಾಗಿದ್ದು, ಇದೀಗ ಅದೇ ಮಾದರಿಯಲ್ಲೇ ಮಹಾರಾಷ್ಟ್ರದಲ್ಲೂ ಮರಾಠಿ ಭಾಷೆ ಕಡ್ಡಾಯಗೊಳಿಸಲಾಗಿದೆ. ಸಿಬಿಎಸ್ಸಿ, ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲೂ ಈ ಭಾಷೆ ಕಡ್ಡಾಯವಾಗಿದೆ.
1,500 ಹಾಗೂ 2,000 ವರ್ಷಗಳ ಹಿಂದಿನ ಇತಿಹಾಸವಿರುವ ಮರಾಠಿ ಭಾಷೆಯನ್ನ ಸಾಂಸ್ಕೃತಿಕ ಭಾಷೆಯನ್ನಾಗಿ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಎಲ್ಲ ಪಕ್ಷದ ಸದಸ್ಯರು ಒತ್ತಾಯಿಸಿದರು.