ನವದೆಹಲಿ: ಮೈಕ್ರೋಸಾಫ್ಟ್ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ನಿರ್ದೇಶಕ ಮಂಡಳಿಯಿಂದ ಹೊರಬಂದಿದ್ದಾರೆ. ಸಾಮಾಜಿಕ ಕಾರ್ಯಗಳತ್ತ ಗಮನಹರಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
1975ರಲ್ಲಿ ಪೌಲ್ ಅಲೆನ್ ಅವರೊಂದಿಗೆ ಬಿಲ್ಗೇಟ್ಸ್ ಕಂಪನಿಯನ್ನು ಪ್ರಾರಂಭಿಸಿದ್ದರು. ಬಿಲ್ ಗೇಟ್ಸ್ ಅವರು 2000ದವರೆಗೆ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು. ನಂತರ ಸಿಇಒ ಸ್ಥಾನದಿಂದ ಕೆಳಗಿಳಿದ ಬಳಿಕ ಅವರು ಕಂಪನಿಯಲ್ಲಿ ತಮ್ಮ ತೊಡಗಿಸಿಕೊಳ್ಳುವಿಕೆಯನ್ನು ಕಡಿಮೆ ಮಾಡಿದ್ದರು. 2008ರಲ್ಲಿ ಮೈಕ್ರೋಸಾಫ್ಟ್ನ ದಿನನಿತ್ಯದ ಕೆಲಸ ಕಾರ್ಯಗಳಿಂದ ಹೊರಬಂದಿದ್ದದ್ದ ಅವರು 2014 ರವರೆಗೆ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.