ಕರ್ನಾಟಕ

karnataka

ETV Bharat / bharat

ಡಿ. 17 ರಂದು ಭಾರತ- ಬಾಂಗ್ಲಾ ಪ್ರಧಾನಿಗಳ ದ್ವಿಪಕ್ಷೀಯ ಶೃಂಗಸಭೆ - ಭಾರತ- ಬಾಂಗ್ಲಾ ಪ್ರಧಾನಿಗಳ ವರ್ಚುವಲ್ ಸಮ್ಮಿಟ್

ಡಿಸೆಂಬರ್ 17 ಗುರುವಾರದಂದು ನಡೆಯಲಿರುವ ದ್ವಿಪಕ್ಷೀಯ ವರ್ಚುಯಲ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬಾಂಗ್ಲಾದೇಶದ ಪ್ರಧಾನಿಯ ಜೊತೆ ಚರ್ಚೆ ನಡೆಸಲಿದ್ದಾರೆ.

Modi and Sheikh Hasina to hold virtual summit
ಭಾರತ- ಬಾಂಗ್ಲಾ ಪ್ರಧಾನಿಗಳ ದ್ವಿಪಕ್ಷೀಯ ಶೃಂಗಸಭೆ

By

Published : Dec 14, 2020, 10:23 PM IST

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಡಿಸೆಂಬರ್ 17 ಗುರುವಾರದಂದು ದ್ವಿಪಕ್ಷೀಯ ವರ್ಚುಯಲ್ ಶೃಂಗ ಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಶೃಂಗಸಭೆಯಲ್ಲಿ ಉಭಯ ನಾಯಕರು ಕೋವಿಡ್​ ನಂತರ ಎರಡು ರಾಷ್ಟ್ರಗಳ ನಡುವಿನ ಸಹಕಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧ ವೃದ್ದಿಸುವ ಕುರಿತು ಸಮಗ್ರ ಚರ್ಚೆ ನಡೆಸಲಿದ್ದಾರೆ. ಬಾಂಗ್ಲಾ ದೇಶವು ಒಂದು ಪ್ರಮುಖ ರಾಷ್ಟ್ರವಾಗಿದ್ದು, ಭವಿಷ್ಯದಲ್ಲಿ ಭಾರತ ಮತ್ತು ಬಾಂಗ್ಲಾ ನಡುವಿನ ಸಂಬಂಧ ಮುಂದುವರಿಸಲು ವರ್ಚುಯಲ್ ಶೃಂಗಸಭೆಯು ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ವಿದೇಶಾಂಗ ಮುಖ್ಯಸ್ಥರು ಹೇಳಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಬಾಂಗ್ಲಾದೇಶದ ವಿದೇಶಾಂಗ ನೀತಿ ತಜ್ಞರು ಮತ್ತು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ಒಆರ್​ಎಫ್​) ನ ಹಿರಿಯ ತಜ್ಞೆ ಜೋಯೀತಾ ಭಟ್ಟಾಚಾರ್ಜಿ, ವರ್ಚುಯಲ್ ಶೃಂಗ ಸಭೆಯು ಕೋವಿಡ್​ ಕುರಿತು ಚರ್ಚಿಸಲು ನಮಗೆ ಒಂದು ಉತ್ತಮ ಅವಕಾಶವಾಗಿದೆ. ಅಲ್ಲದೇ, ಮುಂಬರುವ 2021 ರ ದ್ವಿಪಕ್ಷೀಯ ಮಾತುಕತೆಗೆ ಇದು ಒಂದು ಚಾಲನೆಯಾಗಿದೆ ಮತ್ತು ಎರಡು ರಾಷ್ಟ್ರಗಳ ನಡುವಿನ ಸಂಬಂಧ ವೃದ್ದಿಸಲು ಸಹಕಾರಿಯಾಗಿದೆ ಎಂದಿದ್ದಾರೆ.

ABOUT THE AUTHOR

...view details