ಹೊಸದೆಹಲಿ :ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಕಾಯ್ದರೂ ವೈದ್ಯರ ಭೇಟಿಯೇ ಸಾಧ್ಯವಾಗಿಲ್ಲ. ಬಿಹಾರದ ಬೇಗುಸರಾಯ್ನಿಂದ ಬಂದಿರುವ 48 ವರ್ಷದ ಮಹಿಳೆಲಾಕ್ಡೌನ್ನಿಂದ ಅಕ್ಷರಶಃ ಅಲೆಮಾರಿಯಂತೆ ಜೀವನ ನಡೆಸುವಂತಾಗಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಸಂತ್ರಸ್ತೆ, 'ನಾನು ವಿಪರೀತ ಕಿಡ್ನಿ ನೋವಿನಿಂದ ಬಳಲುತ್ತಿರುವೆ. ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಅವರು ನೀಡುವ ಚುಚ್ಚುಮದ್ದಿನಿಂದ ತಾತ್ಕಾಲಿಕವಾಗಿ ನೋವು ಕಡಿಮೆಯಾಗುತ್ತೆ. ಆದರೆ, ನೋವು ತಡೆಯಲು ಸಾಧ್ಯವಾಗದ್ದರಿಂದ ಚಿಕಿತ್ಸೆಗಾಗಿ ದೆಹಲಿಗೆ ಬಂದರೆ, ಇಲ್ಲಿಯೂ ಚಿಕಿತ್ಸೆ ಸಿಗುತ್ತಿಲ್ಲ. ಅದೆಷ್ಟೋ ಬಾರಿ ಆಸ್ಪತ್ರೆಗೆ ಬಂದರೂ ಒಬ್ಬನೇ ಒಬ್ಬ ವೈದ್ಯನೂ ತನ್ನನ್ನು ನೋಡಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡರು.