ಪಾಟ್ನಾ:ಕಾಮುಕನೋರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದು, ಈ ವೇಳೆ ಪ್ರತಿರೋಧ ಒಡ್ಡಿದ್ದಕ್ಕೆ ಆಕೆಯ ಮೇಲೆ ಗುಂಡು ಹಾರಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆ ತನ್ನ ಸಹೋದರಿ ಜತೆ ಜಾತ್ರೆ ನೋಡಲು ತೆರಳುತ್ತಿದ್ದ ವೇಳೆ ನಡುದಾರಿಯಲ್ಲಿ ಆಕೆಯನ್ನ ದುಷ್ಕರ್ಮಿಯೋರ್ವ ಅಡ್ಡಗಟ್ಟಿದ್ದಾನೆ. ಈ ವೇಳೆ ಕೈಯಲ್ಲಿ ಬಂದೂಕು ಹಿಡಿದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಪ್ರತಿರೋಧ ಒಡ್ಡಿದ್ದಕ್ಕಾಗಿ ಆಕೆಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.