ಪಾಟ್ನಾ(ಬಿಹಾರ): ಆರ್ಜೆಡಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಮೂವರು ಶಾಸಕರು ನಿತೀಶ್ ಕುಮಾರ್ ನೇತೃತ್ವದ ಜೆಡಿಯುವ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೈಘಾಟ್ ಶಾಸಕ ಮಹೇಶ್ವರ ಪ್ರಸಾದ್ ಯಾದವ್, ಪಾಟೆಪುರ ಶಾಸಕಿ ಪ್ರೇಮಾ ಚೌಧರಿ ಮತ್ತು ಕಿಯೋಟಿ ಶಾಸಕ ಫರಾಜ್ ಫಾತ್ಮಿ ಅವರನ್ನು ಆರ್ಜೆಡಿ ಪಕ್ಷದಿಂದ ಹೊರ ಹಾಕಲಾಗಿತ್ತು. ಜೆಡಿಯು ಇಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದು, ಈ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.