ಕರ್ನಾಟಕ

karnataka

ETV Bharat / bharat

1,200 ಕಿ.ಮೀ. ಸೈಕಲ್ ತುಳಿದ 15ರ ಬಾಲಕಿಗೆ ಸೈಕ್ಲಿಂಗ್ ಫೆಡರೇಷನ್ ಆಹ್ವಾನ - ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಟ್ರಯಲ್ಸ್

ಭಾರತೀಯ ಸೈಕ್ಲಿಂಗ್ ಫೆಡರೇಶನ್ ಜ್ಯೋತಿ ಕುಮಾರಿಯನ್ನು ಮುಂದಿನ ತಿಂಗಳು ಅರ್ಹತಾ ಪರೀಕ್ಷೆಗೆ ಆಹ್ವಾನಿಸಿದೆ. ಒಂದು ವೇಳೆ ಜ್ಯೋತಿ ಕುಮಾರಿ ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡರೆ ಆಕೆಯನ್ನು ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣ ಸಮುಚ್ಛಯದಲ್ಲಿರುವ ಸ್ಟೇಟ್ ಆಫ್ ದಿ ಆರ್ಟ್ ರಾಷ್ಟ್ರೀಯ ಸೈಕ್ಲಿಂಗ್ ಆಕಾಡೆಮಿಯಲ್ಲಿ ಟ್ರೈನಿಯಾಗಿ ಪಡೆಯಲಿದ್ದಾರೆ.

ಬಿಹಾರದ18 ವರ್ಷದ ಬಾಲಕಿಗೆ ಟ್ರಯಲ್ಸ್​​​ಗೆ ಆಹ್ವಾನ
ಬಿಹಾರದ18 ವರ್ಷದ ಬಾಲಕಿಗೆ ಟ್ರಯಲ್ಸ್​​​ಗೆ ಆಹ್ವಾನ

By

Published : May 22, 2020, 8:40 PM IST

ದರ್ಭಂಗಾ (ಬಿಹಾರ): ಲಾಕ್​ಡೌನ್​ನಿಂದ ಗುರುಗ್ರಾಮ್​ನಲ್ಲಿ ತಂದೆ ಮಗಳು ಸಿಲುಕಿಕೊಂಡಿದ್ದರು. ಬಳಿಕ ಮಗಳು ತಂದೆಯನ್ನು ಸೈಕಲ್​​ನಲ್ಲಿ ಕೂರಿಸಿಕೊಂಡು ಅಲ್ಲಿಂದ 1200 ಕಿ.ಮೀ. ದೂರದ ಬಿಹಾರದ ತಮ್ಮ ಸ್ವಗ್ರಾಮಕ್ಕೆ ಕರೆದುಕೊಂಡು ಬಂದಿದ್ದಳು. ಇದೀಗ ಜ್ಯೋತಿ ಕುಮಾರಿಗೆ ಸೈಕ್ಲಿಂಗ್​​​ ಫೆಡರೇಷನ್​ ಟ್ರಯಲ್ಸ್​​ನಲ್ಲಿ ಭಾಗವಹಿಸಲು ಆಹ್ವಾನ ನೀಡಿದೆ.

ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಒಂಕರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಜ್ಯೋತಿ ಟ್ರಯಲ್ಸ್​​ನಲ್ಲಿ ಉತ್ತೀರ್ಣರಾದರೆ, ಇಲ್ಲಿನ ಐಜಿಐ ಸ್ಟೇಡಿಯಂ ಸಂಕೀರ್ಣದಲ್ಲಿರುವ ಅತ್ಯಾಧುನಿಕ ರಾಷ್ಟ್ರೀಯ ಸೈಕ್ಲಿಂಗ್ ಅಕಾಡೆಮಿಯಲ್ಲಿ ತರಬೇತುದಾರರಾಗಿ ಆಯ್ಕೆಯಾಗುತ್ತಾರೆ ಎಂದರು.

ಬಿಹಾರದ18 ವರ್ಷದ ಬಾಲಕಿಗೆ ಟ್ರಯಲ್ಸ್​​​ಗೆ ಆಹ್ವಾನ

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಆಶ್ರಯದಲ್ಲಿರುವ ಈ ಅಕಾಡೆಮಿ ಏಷ್ಯಾದ ಅತ್ಯಾಧುನಿಕ ಸೌಲಭ್ಯಗಳಲ್ಲಿ ಒಂದಾಗಿದೆ. ಕ್ರೀಡೆಯ ವಿಶ್ವ ಸಂಸ್ಥೆಯಾದ ಯುಸಿಐನ ಮಾನ್ಯತೆಯನ್ನು ಹೊಂದಿದೆ.

ಇಂದು ಬೆಳಗ್ಗೆ ಜ್ಯೋತಿಯೊಂದಿಗೆ ಮಾತನಾಡಿದ್ದೇವೆ. ಮುಂದಿನ ತಿಂಗಳಲ್ಲಿ ದೆಹಲಿಗೆ ಬರಬೇಕೆಂದು ಆಮಂತ್ರಣ ನೀಡಿದ್ದೇವೆ. ಲಾಕ್​ಡೌನ್​ ತೆರವುಗೊಳಿಸಿದ ನಂತರ ದೆಹಲಿಯ ಇಂದಿರಾ ಗಾಂಧಿ ಸೈಕ್ಲಿಂಗ್​​ ಅಕಾಡೆಮಿಯಲ್ಲಿ ಟ್ರಯಲ್ಸ್​ ನೀಡಲು ವ್ಯವಸ್ಥೆ ಮಾಡಲಿದ್ದೇವೆ. ಅವರಿಗೆ ತಮ್ಮ ಗ್ರಾಮದಿಂದ ಬರಲು ಎಲ್ಲ ವ್ಯವಸ್ಥೆಯನ್ನು ನಾವೇ ಮಾಡುತ್ತೇವೆ. ವೆಚ್ಚವನ್ನೂ ನಮ್ಮ ಸಂಸ್ಥೆ ಭರಿಸುವುದು ಎಂದು ಸಂಸ್ಥೆಯ ಮುಖ್ಯಸ್ಥ ಓಂಕಾರ್​ ಸಿಂಗ್​ ತಿಳಿಸಿದ್ದಾರೆ.

ಒಂದು ವೇಳೆ ಅವರು ಮನೆಯಿಂದ ಯಾರೊಂದಿಗಾದರೂ ಬರಲು ಇಚ್ಛಿಸಿದ್ರೆ, ನಾವು ಅದನ್ನು ಅನುಮತಿಸುತ್ತೇವೆ. ದೆಹಲಿಗೆ ಹೇಗೆ ಕರೆತರಬಹುದು ಎಂಬುದರ ಕುರಿತು ಬಿಹಾರದ ರಾಜ್ಯ ಘಟಕದೊಂದಿಗೆ ಸಮಾಲೋಚಿಸಿ ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು.

ಬಿಹಾರದ18 ವರ್ಷದ ಬಾಲಕಿಗೆ ಟ್ರಯಲ್ಸ್​​​ಗೆ ಆಹ್ವಾನ

ಈ ಬಾಲಕಿಯಲ್ಲಿ ಉತ್ತಮ ಸಾಮರ್ಥ್ಯ ಇದೆ. ಅದೇನೋ ವಿಶೇಷ ಪ್ರತಿಭೆ ಇದೆ ಎನಿಸುತ್ತಿದೆ. 1,200 ಕಿ.ಮೀ. ಸೈಕಲ್​ ಹೊಡೆಯುವುದು ಸುಲಭದ ಮಾತಲ್ಲ. ಆಕೆಯ ದೈಹಿಕ ಕ್ಷಮತೆಯ ಪರೀಕ್ಷೆ ಮಾಡುತ್ತೇವೆ. ನಮ್ಮ ಅಕಾಡೆಮಿಯಲ್ಲಿರುವ ಕಂಪ್ಯೂಟರೀಕೃತ ಸೈಕಲ್​ ಮೇಲೆ ಪರೀಕ್ಷೆ ನೀಡಲು ಅವಕಾಶ ಕೊಡುತ್ತೇವೆ. ಏಳೆಂಟು ಮಾನದಂಡಗಳನ್ನು ನಿಗದಿ ಮಾಡಿದ್ದೇವೆ. ಅವುಗಳಲ್ಲಿ ಅವರು ಉತ್ತೀರ್ಣರಾದರೆ 15 ವರ್ಷದೊಳಗಿನವರ ಟ್ರೇನಿಗಳಲ್ಲಿ ಸ್ಥಾನ ಪಡೆಯುವರು. ಅಕಾಡೆಮಿಯಲ್ಲಿ ಈಗಾಗಲೇ 10 ಮಂದಿ ಸೈಕ್ಲಿಸ್ಟ್​ಗಳು ಇದ್ದಾರೆ ಎಂದು ಸಿಂಗ್​ ತಿಳಿಸಿದರು.

ಗುರುಗ್ರಾಮ್​ದಲ್ಲಿ ಜ್ಯೋತಿಯ ತಂದೆ ಮೋಹನ್​​ ಪಾಸ್ವಾನ್​​ ಆಟೋರಿಕ್ಷಾ ಚಾಲಕರಾಗಿದ್ದರು. ಆದರೆ, ಅವರು ಅಪಘಾತದಲ್ಲಿ ಗಾಯಗೊಂಡಿದ್ದರು. ಲಾಕ್​ಡೌನ್​ ವೇಳೆ ಯಾವುದೇ ಆದಾಯದ ಮೂಲವಿಲ್ಲದೆ ಆಟೋ ರಿಕ್ಷಾವನ್ನು ಮಾಲೀಕರಿಗೆ ಕೊಡಬೇಕಾಯಿತು. ಬಳಿಕ ತಮ್ಮ ಹತ್ತಿರ ಇದ್ದ ಹಣದಲ್ಲೇ ಸೈಕಲ್​ ಖರೀದಿಸಿ, ಮೇ 10ರಂದು ತಮ್ಮ ಪ್ರಯಾಣವನ್ನು ಆರಂಭಿಸಿ, ಮೇ 1 ರಂದು ಸ್ವಗ್ರಾಮ ತಲುಪಿದರು.

ABOUT THE AUTHOR

...view details