ಕರ್ನಾಟಕ

karnataka

ETV Bharat / bharat

ಬಿಹಾರ ಚುನಾವಣಾ ಫಲಿತಾಂಶ.. ತೇಜಸ್ವಿ ನಿವಾಸದ ಮುಂದೆ ವ್ಯಾಪಾರ ಜೋರು.. - ತೇಜಸ್ವಿ ನಿವಾಸದ ಬಳಿ ಬೆಂಬಲಿಗರ ಜಮಾವಣೆ

ಐಸ್ ಕ್ರೀಮ್ ಹಾಗೂ ಕಬ್ಬಿನ ಹಾಲು ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮೀಪದ ಮೊಬೈಲ್ ಅಂಗಡಿಗಳಲ್ಲಿಯೂ ಕೂಡ ವ್ಯಾಪಾರ-ವಹಿವಾಟು ಜೋರಾಗಿದೆ..

tejashwi residence
ತೇಜಸ್ವಿ ನಿವಾಸ

By

Published : Nov 10, 2020, 7:09 PM IST

ಪಾಟ್ನಾ : ವಿಧಾನಸಭಾ ಚುನಾವಣಾ ಫಲಿತಾಂಶ ಬಹಿರಂಗಗೊಳ್ಳುತ್ತಿರುವ ಬೆನ್ನಲ್ಲೇ ಮಹಾಘಟ ಬಂಧನ್​ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ನಿವಾಸದ ಮುಂದೆ ವ್ಯಾಪಾರ, ವಹಿವಾಟು ಜೋರಾಗಿ ನಡೆಯುತ್ತಿದೆ.

ಚುನಾವಣೋತ್ತರ ಫಲಿತಾಂಶ ಮಹಾಘಟಬಂಧನ್ ಪರವಾಗಿ ಅಂಕಿ ಅಂಶಗಳನ್ನು ನೀಡದ ಬೆನ್ನಲ್ಲೇ ತೇಜಸ್ವಿ ನಿವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬರುತ್ತಿರುವುದರಿಂದ ವಿವಿಧ ವ್ಯಾಪಾರಿಗಳು ಸ್ಥಳದಲ್ಲಿ ಬಿಡಾರ ಹೂಡಿದ್ದಾರೆ.

ಐಸ್ ಕ್ರೀಮ್ ಹಾಗೂ ಕಬ್ಬಿನ ಹಾಲು ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮೀಪದಲ್ಲಿರುವ ಮೊಬೈಲ್ ಅಂಗಡಿಗಳಲ್ಲಿಯೂ ಕೂಡ ವ್ಯಾಪಾರ-ವಹಿವಾಟು ಜೋರಾಗಿದೆ. ಮತ ಎಣಿಕೆ ಶುರುವಾಗಿ ಸಂಜೆಯಾಗುತ್ತಿದ್ದಂತೆ ವ್ಯಾಪಾರಿಗಳ ಸಂಖ್ಯೆ ಕೂಡ ಇಳಿಮುಖವಾಗಿದೆ.

ಈಗ ಸದ್ಯಕ್ಕೆ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ತಲೆಕೆಳಗಾಗುವಂತೆ ಎನ್​ಡಿಎ ಮುನ್ನಡೆಯಲ್ಲಿದ್ದು, ತೇಜಸ್ವಿ ನೇತೃತ್ವದ ಮಹಾಘಟಬಂಧನ್‌ಗೆ ಹಿನ್ನಡೆ ಆಗುವ ಸಾಧ್ಯತೆ ಕಾಣುತ್ತಿದೆ.

ABOUT THE AUTHOR

...view details