ಪಾಟ್ನಾ:ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮೊದಲ ಬಾರಿಗೆ ಮತ ಚಲಾವಣೆ ಮಾಡಲು ಯುವತಿವೋರ್ವಳು ತನ್ನ ಅಜ್ಜಿಯನ್ನು ಕೂರಿಸಿಕೊಂಡು ಸೈಕಲ್ನಲ್ಲೇ ಮತದಾನ ಕೇಂದ್ರಕ್ಕೆ ಬಂದಿದ್ದಾಳೆ.
ಬಿಹಾರ ಎಲೆಕ್ಷನ್: ಅಜ್ಜಿಯೊಂದಿಗೆ ಸೈಕಲ್ನಲ್ಲೇ ಬಂದು ಮತಚಲಾಯಿಸಿದ 'ಫಸ್ಟ್ ಟೈಮ್ ವೋಟರ್' - ಬಿಹಾರ ಉಪ ಚುನಾವಣೆ ಲೇಟೆಸ್ಟ್ ಸುದ್ದಿ
ಬಿಹಾರ ಚುನಾವಣೆ ಹಿನ್ನೆಲೆ ಮೊದಲ ಬಾರಿ ತನ್ನ ಮತದಾನದ ಹಕ್ಕು ಚಲಾಯಿಸಲು ಯುವತಿವೋರ್ವಳು ತನ್ನ ಅಜ್ಜಿಯೊಂದಿಗೆ ಪಾಟ್ನಾದ ಮತದಾನ ಕೇಂದ್ರಕ್ಕೆ ಸೈಕಲ್ನಲ್ಲೇ ಬಂದು ಗಮನ ಸೆಳೆದಿದ್ದಾಳೆ.

ಈ ಕುರಿತು ಪ್ರತಿಕ್ರಿಯಿಸಿದ ಯುವತಿ ಪ್ರಿಯಾಂಕ ಇದೇ ಮೊದಲ ಬಾರಿ ನಾನು ವೋಟ್ ಮಾಡುತ್ತಿದ್ದೇನೆ. ಅದಕ್ಕಾಗಿ ನನ್ನ ಅಜ್ಜಿ ರುಕ್ಮಿಣಿಯವರೊಂದಿಗೆ ಬಂದಿದ್ದೇನೆ. ಭವಿಷ್ಯದಲ್ಲಿ ಎಲ್ಲಾ ಯುವಜನತೆಗೆ ಉದ್ಯೋಗ ದೊರೆಯಬೇಕು ಎಂದು ಯುವತಿ ತನ್ನ ಆಶಯ ವ್ಯಕ್ತಪಡಿಸಿದಳು.
ಇನ್ನು ಇಂದು ಬಿಹಾರ ಅಸೆಂಬ್ಲಿಯ 94 ಸ್ಥಾನಗಳಿಗೆ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 17 ಜಿಲ್ಲೆಗಳ ಸುಮಾರು 41,362 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯುತ್ತಿದೆ. ಕೋವಿಡ್ ಹಿನ್ನೆಲೆ ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇಂದು ಬಿಹಾರದ ಸುಮಾರು 2.85 ಮಂದಿ ಮತ ಚಲಾವಣೆ ಮಾಡುತ್ತಿದ್ದಾರೆ. ಇದೇ ನವೆಂಬರ್ 10ರಂದು ಫಲಿತಾಂಶ ಹೊರಬೀಳಲಿದೆ.