ಕರ್ನಾಟಕ

karnataka

ETV Bharat / bharat

ಬಿಹಾರ ಫಲಿತಾಂಶ: ಹೆಚ್ಚು ಸೀಟು ಪಡೆದ ಬಿಜೆಪಿಗೆ ವೋಟ್ ಶೇರ್​ನಲ್ಲಿ ಹಿನ್ನಡೆ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 74 ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೂ, ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದ್ರೆ ಕಡಿಮೆ ಮತಗಳನ್ನು ಪಡೆದಿದೆ.

pulls down NDA vote share since 2019 LS elections
ಬಿಜೆಪಿಗೆ ವೋಟ್ ಶೇರ್​ನಲ್ಲಿ ಹಿನ್ನಡೆ

By

Published : Nov 11, 2020, 9:26 AM IST

ನವದೆಹಲಿ: ಬಿಹಾರದಲ್ಲಿ ಸುಮಾರು ಎರಡು ದಶಕಗಳಲ್ಲಿ ಮೊದಲ ಬಾರಿಗೆ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಸಿಕ್ಕಿದೆ. ಆದರೆ, ಶೇಕಡವಾರು ಮತಗಳ ಪ್ರಮಾಣ ಮಾತ್ರ ಇಳಿಕೆಯಾಗಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಎಲ್​ಜೆಪಿ ಪಕ್ಷವನ್ನು ಒಳಗೊಂಡ ಎನ್​ಡಿಎ ಮೈತ್ರಿಕೂಟ ಶೇಕಡಾ 53ಕ್ಕೂ ಹೆಚ್ಚು ಮತಗಳನ್ನು ಗಳಿಸಿ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಗೆದ್ದಿದೆ. ಆದರೆ, ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವಂತವಾಗಿ ಸ್ಪರ್ಧಿಸಿರುವ ಎಲ್​ಜೆಪಿ, ಶೇಕಡಾ ಆರಕ್ಕಿಂತ ಕಡಿಮೆ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ, ಆದರೆ ವಿರೋಧ ಶಿಬಿರದಲ್ಲಿದ್ದ ಹೆಚ್‌ಎಎಂ ಮತ್ತು ವಿಐಪಿ ಈಗ ಎನ್‌ಡಿಎಯ ಭಾಗವಾಗಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬಿಜೆಪಿ, ಜೆಡಿಯು, ಹೆಚ್‌ಎಎಂ ಮತ್ತು ವಿಐಪಿ ಸೇರಿದಂತೆ ಎನ್‌ಡಿಎಯ ಒಟ್ಟು ಶೇ 40 ಕ್ಕಿಂತ ಕಡಿಮೆ ಮತಗಳನ್ನು ಪಡೆದಿದೆ. ಆರ್‌ಜೆಡಿ ನೇತೃತ್ವದ ಮಹಾಘಟನಬಂಧನ ಒಕ್ಕೂಟವು ಶೇಕಡಾ 37 ರಷ್ಟು ಮತಗಳನ್ನು ಗಳಿಸಿದೆ.

ಪಕ್ಷವಾರು, ಜೆಡಿಯು 2019 ರ ಲೋಕಸಭಾ ಚುನಾವಣೆಯಲ್ಲಿ ಶೇ 21.81 ರಷ್ಟು ಮತಗಳನ್ನು ಪಡೆದಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 15 ರಷ್ಟು ಮತಗಳನ್ನು ಪಡೆದಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಶೇ 23.58 ರಷ್ಟು ಮತಗಳನ್ನು ಪಡೆದಿತ್ತು ಆದರೆ ಈಗ ಶೇ. 20 ರಷ್ಟು ಮತಗಳನ್ನು ಪಡೆದಿದೆ.

ಲೋಕಸಭೆ ಚುನಾವಣೆ ನಂತರ ನಡೆದ ಇತರ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತಗಳ ಪ್ರಮಾಣ ಕಡಿಮೆಯಾಗಿರುವುದನ್ನು ಗಮನಿಸಬಹುದಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಾರ್ಖಂಡ್‌ನಲ್ಲಿ ಶೇ 55 ಕ್ಕಿಂತ ಹೆಚ್ಚು ಮತ್ತು ಹರಿಯಾಣದಲ್ಲಿ ಶೇ 58 ಕ್ಕಿಂತ ಹೆಚ್ಚು ಮತ ಪಡೆದಿತ್ತು. ಆದರೆ, ಸಾರ್ವತ್ರಿಕ ಚುನಾವಣೆ ನಡೆದ ಕೆಲವೇ ತಿಂಗಳುಗಳಲ್ಲಿ ನಡೆದ ಈ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕ್ರಮವಾಗಿ ಶೇಕಡಾ 33 ಮತ್ತು 36ಕ್ಕೆ ಕುಸಿದಿದೆ.

ABOUT THE AUTHOR

...view details