ಕರ್ನಾಟಕ

karnataka

ETV Bharat / bharat

ಸಂಚಲನ ಸೃಷ್ಟಿಸಿದ 10 ಲಕ್ಷ ಉದ್ಯೋಗ ಸೃಷ್ಟಿ ಭರವಸೆ: ಆರ್​ಜೆಡಿ ಬಗ್ಗೆ ಜನ ಹೇಳೋದೇನು? - ತೇಜಸ್ವಿ ಯಾದವ್ ಪ್ರಚಾರ

ಬಿಹಾರದಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಪಕ್ಷಗಳು ಗೆಲುವಿಗೆ ಕಸರತ್ತು ನಡೆಸುತ್ತಿದ್ದು, ಆರ್​​ಜೆಡಿ ಪಕ್ಷ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದೆ. ಇದು ಜನರನ್ನು ಹೆಚ್ಚಾಗಿ ಪ್ರಚಾರ ಸಭೆಗಳಿಗೆ ಸೆಳೆಯುತ್ತಿದೆ.

tejaswi yadav
ತೇಜಸ್ವಿ ಯಾದವ್

By

Published : Oct 22, 2020, 1:12 PM IST

ಪಾಟ್ನಾ (ಬಿಹಾರ): ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಆರ್​ಜೆಡಿ ಪಕ್ಷ ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದೆ. ಈ ವಿಚಾರ ಬಿಹಾರದಲ್ಲಿ ಸಂಚಲನ ಉಂಟುಮಾಡಿದ್ದು, ಜನರನ್ನು ಚುನಾವಣಾ ಪ್ರಚಾರ ಸಭೆಗಳಿಗೆ ಸೆಳೆಯಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯಾದ ಆರ್​​ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಜನರು ಬರುತ್ತಿದ್ದು, ಆರ್​ಜೆಡಿ ಪಕ್ಷವಿರುವ ಮಹಾಘಟಬಂಧನ್ ಸದಸ್ಯ ಪಕ್ಷಗಳ ಸಮಾರಂಭಗಳಲ್ಲೂ ಜನರು ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ.

ಬುಧವಾರ ತೇಜಸ್ವಿ ಯಾದವ್ ಮಸೌಧಿ ಎಂಬಲ್ಲಿ ಚುನಾವಣಾ ಸಭೆ ನಡೆಸಿದ್ದು, ಜನಸಮೂಹವನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದರು. ಹೆಚ್ಚು ಜನಸಂಖ್ಯೆಯ ಕಾರಣದಿಂದ ಬ್ಯಾರಿಕೇಡ್​ ಹಾಗೂ ಪೊಲೀಸರಿಗೆ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದೆಲ್ಲವೂ ಕೂಡಾ ಜನರಿಗೆ ಆರ್​ಜೆಡಿ ನೀಡಿರುವ ಭರವಸೆಗಳನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ಸರ್ಕಾರಿ ವಲಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ಬಿಹಾರದ ಜನರಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇದರಿಂದಾಗಿ ಜನರು ತೇಜಸ್ವಿ ಅವರ ಭಾಷಣಗಳಿಗೆ ಆಗಮಿಸುತ್ತಿದ್ದಾರೆ ಎಂದು ಮಸೌಧಿ ನಿವಾಸಿಯಾದ ರಾಹುಲ್ ಶರ್ಮ ಎಂಬಾತ ಪ್ರತಿಕ್ರಿಯೆ ನೀಡಿದ್ದಾನೆ.

ಮತ್ತೋರ್ವ ವ್ಯಕ್ತಿ ರಮೇಶ್ ಸಾಗರ್ "ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹಣದುಬ್ಬರ, ಉದ್ಯೋಗ ಸೃಷ್ಟಿ, ವಲಸೆ ಮುಂತಾದ ವಿಷಯಗಳ ಸರಿಯಾದ ನಿರ್ವಹಣೆ ಮಾಡದಿರುವ ಆರೋಪವಿದ್ದು, ಇದರಿಂದ ಜನರು ನೊಂದಿದ್ದಾರೆ'' ಎಂದು ಹೇಳಿದ್ದಾರೆ.

ಇದರ ಜೊತೆಗೆ ಲಾಲೂ ಪ್ರಸಾದ್ ಥರಹದ ರಾಜಕಾರಣಿಗಳು ಅನುಸರಿಸುತ್ತಿರುವ ಸಮಾಜವಾದಿ ಮಾರ್ಗಗಳು ಮತ್ತು ಸಮಾನತೆ ಪ್ರತಿಪಾದನೆ ಜನರನ್ನು ಆಕರ್ಷಿಸಿದ್ದು, ಅವರ ಮಗನಿಗೆ ಸಹಕಾರಿಯಾಗಲಿದೆ ಎಂದು ರಮೇಶ್ ಸಾಗರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೃಷ್ಣ ಶರ್ಮ ಎಂಬಾತ ನಾವು ಬದಲಾವಣೆಗಾಗಿ ತೇಜಸ್ವಿಯವರನ್ನು ಎದುರು ನೋಡುತ್ತಿದ್ದೇವೆ, ಅವರ ಮೇಲೆ ಭರವಸೆಯಿದೆ ಎಂದಿದ್ದು ಆರ್​ಜೆಡಿ ಪಕ್ಷ ಜನರ ನಾಡಿಮಿಡಿತವನ್ನು ಅರಿತುಕೊಂಡಿದೆ ಎಂಬ ಅಭಿಪ್ರಾಯ ಮೂಡಿಸಲು ಸಾಧ್ಯವಾಗಿದೆ.

ABOUT THE AUTHOR

...view details