ಪಾಟ್ನಾ/ಬಿಹಾರ: ಇಂಡಿಗೊ ವಿಮಾನಯಾನ ವ್ಯವಸ್ಥಾಪಕ ರೂಪೇಶ್ ಕುಮಾರ್ ಸಿಂಗ್ ಅವರ ಹತ್ಯೆಯಲ್ಲಿ ಬಿಹಾರ ಸರ್ಕಾರದ ಸಚಿವರು ಭಾಗಿಯಾಗಿರಬಹುದು ಎಂಬ ವದಂತಿಗಳು ಹರಡಿವೆ ಎಂದು ಅಲ್ಲಿನ ಪ್ರತಿಪಕ್ಷ ನಾಯಕ ಮತ್ತು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ಈ ಕುರಿತು ಮಾತನಾಡಿರುವ ಅವರು, ಇಂಡಿಗೋ ಏರ್ಲೈನ್ಸ್ ಮ್ಯಾನೇಜರ್ ರೂಪೇಶ್ ಕುಮಾರ್ ಸಿಂಗ್ ಕೊಲೆ ಪ್ರಕರಣದಲ್ಲಿ ಸಿಎಂ ನಿತೀಶ್ ಕುಮಾರ್ ಸರ್ಕಾರದ ಸಚಿವರ ಕೈವಾಡವಿದೆ ಎಂಬ ವದಂತಿಗಳು ಹರಿದಾಡುತ್ತಿವೆ ಎಂದಿದ್ದಾರೆ.
ಈ ಹಿಂದೆ ನಿತೀಶ್ ಕುಮಾರ್ ಅವರು,ಇಂಡಿಗೊ ವಿಮಾನಯಾನ ವ್ಯವಸ್ಥಾಪಕನ ಕೊಲೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಹಾಗೆಯೇ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ವಿವರಿಸಿದ್ದ ಸಿಎಂ ನಿತೀಶ್ ಕುಮಾರ್, "ಅಪರಾಧ ಘಟನೆಗಳಿಗೆ ಸಂಬಂಧಿಸಿದಂತೆ ಬಿಹಾರ ದೇಶದಲ್ಲಿ 23 ನೇ ಸ್ಥಾನದಲ್ಲಿದೆ. ಪೊಲೀಸರು ಈಗಾಗಲೇ ಕೊಲೆ ಆರೋಪಿಗಳಿಗೆ ಜಾಲ ಬೀಸಿದ್ದಾರೆ. ಶೀಘ್ರವೇ ಬಂಧಿಸಿ ವಿಚಾರಣೆ ನಡೆಸುತ್ತೇವೆ ಎಂದು ನನಗೆ ಡಿಜಿಪಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇಂಡಿಗೊ ವಿಮಾನಯಾನ ಸಂಸ್ಥೆಗಳ ವ್ಯವಸ್ಥಾಪಕ ರೂಪೇಶ್ ಕುಮಾರ್ ಸಿಂಗ್ ಅವರನ್ನು ಜನವರಿ 12 ರಂದು ಪಾಟ್ನಾದ ಪುಣೈಚಕ್ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಇದನ್ನೂ ಓದಿ:ಕೊರೊನಾ ವಾರಿಯರ್ಗಳ ಬಗ್ಗೆ ಮಾತನಾಡುವಾಗ ಭಾವುಕರಾದ ಪ್ರಧಾನಿ