ಮುಜಫರ್ಪುರ (ಬಿಹಾರ):ನಾಲ್ಕು ವರ್ಷದ ಬಾಲಕ ಮತ್ತು ಮೂವತ್ತೈದು ವರ್ಷದ ವಲಸೆ ಮಹಿಳೆ ಬಿಹಾರದ ವಿಶೇಷ ಶ್ರಮಿಕ್ ರೈಲಿನಲ್ಲಿ ಸಾವನ್ನಪ್ಪಿದ್ದಾರೆ. ಹಸಿವು ಮತ್ತು ಅನಾರೋಗ್ಯದಿಂದ ಬಳಲಿ ಎರಡು ಜೀವಗಳು ಪ್ರಾಣತೆತ್ತಿವೆ ಎಂದು ಹೇಳಲಾಗುತ್ತಿದೆ.
ಮೃತ ಮಹಿಳೆ ಅರ್ವಿನಾ ಖತುನ್ ಎಂದು ಗುರುತಿಸಲಾಗಿದ್ದು, ಅಹ್ಮದಾಬಾದ್‌ನಲ್ಲಿ ಕೆಲಸ ಮಾಡುತ್ತಿರುವ ತನ್ನ ಸೋದರ ಮಾವ ಮೊಹಮ್ಮದ್ ವಾಜೀರ್ ಜೊತೆ ಪ್ರಯಾಣಿಸುತ್ತಿದ್ದಳು. ಅರ್ವಿನಾ ಮತ್ತು ವಾಜೀರ್ ಲಾಕ್‌ಡೌನ್ ಹಿನ್ನೆಲೆ ಅಲ್ಲಿಯೇ ಸಿಲುಕಿಕೊಂಡಿದ್ದ. ಮೇ 23 ರಂದು ಶ್ರಮಿಕ್ ವಿಶೇಷ ರೈಲಿನಲ್ಲಿ ತಮ್ಮ ತವರೂರಿನೆಡೆಗೆ ಪ್ರಯಾಣ ಆರಂಭಿಸಿದ್ದರು. ವರದಿಗಳ ಪ್ರಕಾರ, ರೈಲು ಮಧ್ಯಾಹ್ನ 3 ರ ಸುಮಾರಿಗೆ ಮುಜಾಫರ್ಪುರ ನಿಲ್ದಾಣವನ್ನು ತಲುಪಿತು. ಆದರೆ, ಅರ್ವಿನಾ ಮಧ್ಯಾಹ್ನ 12 ಗಂಟೆೆ ಅವಧಿಗೆ ಹಸಿವು ಮತ್ತು ತೀವ್ರವಾದ ಬಾಯಾರಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಹಪ್ರಯಾಣಿಕರು ಆರೋಪಿಸಿದ್ದಾರೆ. ಆದರೆ ರೈಲಿನಲ್ಲಿದ್ದ ಪ್ರಯಾಣಿಕರ ಆರೋಪವನ್ನು ನಿರಾಕರಿಸಿದ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ತನ್ನ ತಂದೆ ಮೊಹಮ್ಮದ್ ಪಿಂಟೂ ಅವರೊಂದಿಗೆ ಪ್ರಯಾಣಿಸುತ್ತಿದ್ದ ಮಗು ಮೊಹಮ್ಮದ್ ಇರ್ಷಾದ್ ಅಸುನೀಗಿದೆ. ತಂದೆ-ಮಗ ಮೇ 25 ರಂದು ಅಹಮದಾಬಾದ್‌ನಿಂದ ರೈಲು ಹತ್ತಿದ್ದರು. ಇವರು ತಮ್ಮ ತವರೂರು ಜಮೀನು ತುಲಾರಾಮ್ ಘಾಟ್ ಕಡೆಗೆ ಹೋಗುತ್ತಿದ್ದರು. ವರದಿಯ ಪ್ರಕಾರ, ಪ್ರಯಾಣದ ಸಮಯದಲ್ಲಿ ಪುತ್ರ ಇರ್ಷಾದ್ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಪರಿಣಾಮ ತನ್ನೂರು ತಲುಪುವ ಮೊದಲೇ ಪ್ರಾಣಪಕ್ಷಿ ಹಾರಿಹೋಗಿದೆ.