ನವದೆಹಲಿ:ಲಾಕ್ಡೌನ್ ಸಮಯದಲ್ಲಿ 15 ವರ್ಷದ ಬಾಲಕಿ ತನ್ನ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹರಿಯಾಣದ ಗುರುಗ್ರಾಮ್ನಿಂದ ಬಿಹಾರದ ದರ್ಬಂಗಾಗೆ 1,200 ಕಿ.ಮೀ. ಪ್ರಯಾಣಿಸಿದ್ದಾಳೆ. ಬಾಲಕಿಯ ಈ ಕಾರ್ಯ ಮೆಚ್ಚಿ ಇವಾಂಕಾ ಟ್ರಂಪ್ ಟ್ವೀಟ್ ಮಾಡಿದ್ದಾರೆ.
15 ವರ್ಷ ವಯಸ್ಸಿನ ಜ್ಯೋತಿ ಕುಮಾರಿ, ಗಾಯಗೊಂಡ ತಂದೆಯನ್ನು 7 ದಿನಗಳಲ್ಲಿ 1,200 ಕಿ.ಮೀ. ದೂರವಿರುವ ತಮ್ಮ ಊರಿಗೆ ಸೈಕಲ್ ಮೂಲಕ ಕರೆದೊಯ್ದಿದ್ದಾಳೆ. ಸಹಿಷ್ಣುತೆ ಮತ್ತು ಪ್ರೀತಿಯ ಈ ಸುಂದರವಾದ ಸಾಧನೆಯು ಭಾರತೀಯ ಜನರ ಮತ್ತು ಸೈಕ್ಲಿಂಗ್ ಒಕ್ಕೂಟದ ಕಲ್ಪನೆಯನ್ನು ಸೆರೆ ಹಿಡಿದಿದೆ ಎಂದು ಇವಾಂಕಾ ಟ್ವೀಟ್ ಮಾಡಿದ್ದಾರೆ.
ತಂದೆಯನ್ನು ಕೂರಿಸಿಕೊಂಡು 1,200 ಕಿ.ಮೀ. ಸೈಕಲ್ ತುಳಿದ 15ರ ಬಾಲಕಿ
ಇತ್ತ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಕೂಡ ಬಾಲಕಿಯ ಸಾಧನೆಯನ್ನು ಮೆಚ್ಚಿಕೊಂಡಿದ್ದು, ಪರೀಕ್ಷೆಗೆ ಕರೆದಿದೆ. ಈ ಬಗ್ಗೆ ಈಟಿವಿ ಭಾರತ ಜೊತೆ ಬಾಲಕಿ ಸಂತಸ ವ್ಯಕ್ತಪಡಿಸಿದ್ದು, ಮುಂದಿನ ವಾರ ನವದೆಹಲಿಗೆ ತೆರಳಲಿದ್ದೇನೆ ಎಂದಿದ್ದಾಳೆ.
ತಂದೆ ಮತ್ತು ಮಗಳು ಹರಿಯಾಣದಲ್ಲಿರುವಾಗ ಲಾಕ್ಡೌನ್ ಘೋಷಣೆಯಾದ ಪರಿಣಾಮ ಅವರನ್ನು ಕೆಲಸದಿಂದ ತೆಗೆದ ಮಾಲೀಕ ಮನೆಗೆ ತೆರಳುವಂತೆ ಸೂಚನೆ ನೀಡಿದ್ದಾನೆ. ಈ ವೇಳೆ ಅವರ ಬಳಿ ಇದ್ದದ್ದು ಕೇವಲ 500 ರೂಪಾಯಿ ಮಾತ್ರ. ದಿನಸಿ ತೆಗೆದುಕೊಳ್ಳುವ ತಂದೆಯ ಸಲಹೆ ತಿರಸ್ಕರಿಸಿದ ಪುತ್ರಿ ಒಂದು ಸೈಕಲ್ ತೆಗೆದುಕೊಂಡು ತಂದೆಯನ್ನು ಕೂರಿಸಿಕೊಂಡು 1,200 ಕಿ.ಮೀ. ಪ್ರಯಾಣಿಸಿದ್ದಾಳೆ.