ಬಿಹಾರ: ಧಾರಾಕಾರ ಮಳೆಯಿಂದಾಗಿ ಬಿಹಾರ ರಾಜ್ಯವು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಇತ್ತ ಭಾರತದ ನದಿಗಳಿಗೆ ನೇಪಾಳ ನೀರು ಹರಿಬಿಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ನೇಪಾಳದ ವಾಲ್ಮೀಕಿನಗರ ಗಂಡಕ್ ಬ್ಯಾರೇಜ್‌ನಿಂದ ಸುಮಾರು 2 ಲಕ್ಷ 87 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಬಾಗಮತಿ, ಮಹಾನಂದ ಮತ್ತು ಗಂಡಕ್ ನದಿಗಳ ಜೊತೆ ಸೇರಿ ಕೋಸಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಮತ್ತಷ್ಟು ಹದಗೆಟ್ಟ ಬಿಹಾರ ಪ್ರವಾಹ ಪರಿಸ್ಥಿತಿ ಗಂಡಕ್ ನದಿಯ ನೀರಿನ ಮಟ್ಟವು ಮಳೆ ಮತ್ತು ನೇಪಾಳದಿಂದ ಬಿಡುಗಡೆಯಾಗುವ ನೀರಿನ ಮೇಲೆ ಅವಲಂಬಿತವಾಗಿರುತ್ತದೆ. ಈ ನೀರನ್ನು ಸಮರ್ಪಕವಾಗಿ ಬ್ಯಾರೇಜ್‌ಗಳಲ್ಲಿ ಸಂಗ್ರಹಿಸಿರುವುದರಿಂದ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಮತ್ತೆ ಹೆಚ್ಚುವರಿಯಾಗಿ ನೀರು ಬಿಡುಗಡೆಯಾದರೆ ರಾಜ್ಯದ ಜನರಿಗೆ ತೊಂದರೆ ಉಂಟಾಗಲಿದೆ.
36 ಗೇಟ್‌ಗಳು ಓಪನ್:
ವಾಲ್ಮಿಕಿನಗರ ಗಂಡಕ್ ಬ್ಯಾರೇಜ್‌ನ ಎಲ್ಲಾ 36 ಗೇಟ್‌ಗಳನ್ನು ನೇಪಾಳ ತೆರೆದಿದ್ದು, ಇಂಡೋ-ನೇಪಾಳ ಗಡಿಯಲ್ಲಿರುವ ಚಂಪಾರನ್ನ ತಗ್ಗು ಪ್ರದೇಶದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗಿದೆ. ಈ ಗ್ರಾಮಗಳಲ್ಲಿ ಸುಮಾರು 8 ಅಡಿ ಎತ್ತರದವರೆಗೆ ನೀರು ನಿಂತಿದ್ದು, ಜನರು ತಮ್ಮ ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ.