ಪಾಟ್ನಾ:ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಎನ್ಡಿಎ ಹಾಗೂ ಮಹಾಘಟಬಂಧನ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಮತ ಎಣಿಕೆ ಹಿನ್ನೆಲೆ ಬಿಜೆಪಿ ಕಚೇರಿಯ ಭದ್ರತೆ ಹೆಚ್ಚಿಸಲಾಗಿದ್ದು, ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ.
ಬಿಹಾರ ಚುನಾವಣೆ: ಮ್ಯಾಜಿಕ್ ನಂಬರ್ ದಾಟಿ ಮುನ್ನಡೆ ಸಾಧಿಸಿದ ಎನ್ಡಿಎ - ಬಿಜೆಪಿ ಕಚೇರಿ ಬಳಿ ಜನಸಂದಣಿ - ಬಿಹಾರ ಚುನಾವಣೆ ಮತ ಎಣಿಕೆ
ಬಿಹಾರ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ, ಜೆಡಿಯು ಹಾಗೂ ವಿಐಪಿ ಪಕ್ಷಗಳ ಎನ್ಡಿಎ ಒಕ್ಕೂಟ ಭಾರಿ ಮುನ್ನಡೆ ಸಾಧಿಸಿದೆ.
ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಮಹಾಘಟಬಂಧನ್ ಹಲವು ಸುತ್ತುಗಳ ಎಣಿಕೆಯ ಬಳಿಕ ಹಿನ್ನೆಡೆ ಅನುಭವಿಸಿದೆ. ಎನ್ಡಿಎ ಮ್ಯಾಜಿಕ್ ನಂಬರ್ ದಾಟಿ ಮುನ್ನಡೆ ಕಾಯ್ದುಕೊಂಡಿದೆ. ಎನ್ಡಿಎ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿ ಬಳಿ ಜಮಾವಣೆಗೊಳ್ಳಲು ಪ್ರಾರಂಭಿಸಿದ್ದು, ಹೀಗಾಗಿ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ, ಎನ್ಡಿಎ 130 ರಷ್ಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್ (ಎಂಜಿಬಿ) 110 ರಷ್ಟು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಲ್ಜೆಪಿ 5 ಹಾಗೂ ಇತರರು 2 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.