ಪಾಟ್ನಾ: ಬಿಹಾರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗುಪ್ತೇಶ್ವರ ಪಾಂಡೆ ಅವರು ಮಂಗಳವಾರ ಸೇವೆಯಿಂದ ಸ್ವಯಂಪ್ರೇರಿತವಾಗಿ ನಿವೃತ್ತಿ ತೆಗೆದುಕೊಂಡಿದ್ದು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹ ಎದ್ದಿದೆ.
ಪಾಂಡೆ ಅವರ ಸ್ವಯಂ ನಿವೃತ್ತಿಯ ಮನವಿಯನ್ನು ರಾಜ್ಯಪಾಲ ಫಾಗು ಚೌಹಾನ್ ಅನುಮೋದಿಸಿದ್ದಾರೆ ಎಂದು ರಾಜ್ಯ ಗೃಹ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನಿವೃತ್ತಿಯನ್ನು ರಾಜ್ಯಪಾಲರು ಅನುಮೋದಿಸಿದ ಕೆಲವೇ ಗಂಟೆಗಳ ನಂತರ, ಪಾಂಡೆ ಅವರು ಟ್ವೀಟ್ ಮಾಡಿದ್ದು, ಬುಧವಾರ ಸಂಜೆ 6 ಗಂಟೆಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಲೈವ್ ಬರುತ್ತೇನೆ. ಈ ಲೈವ್ ಮೂಲಕ ತಮ್ಮ ವಿಆರ್ಎಸ್ ಬಗ್ಗೆ ಮಾತನಾಡುತ್ತಾರೆ ಎನ್ನಲಾಗುತ್ತಿದೆ.
1987ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಪಾಂಡೆ, ಮುಂಬೈನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದರು. ಅವರು ಇತ್ತೀಚೆಗೆ ಶಿವಸೇನೆ, ಸಿಎಂ ನಿತೀಶ್ ಕುಮಾರ್ ಆಡಳಿತದ ಮೇಲೆ ದಾಳಿ ಮಾಡಿದ್ದಾಗ ಸರ್ಕಾರದ ಪರವಾಗಿ ನಿಂತು ರಕ್ಷಿಸಿದ್ದರು. ರಜಪೂತ್ ಸಾವಿನ ಬಗ್ಗೆ ಬಿಹಾರ ಪೊಲೀಸರ ತನಿಖೆಗಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ನೇತೃತ್ವವಹಿಸಿತ್ತು. ರಜಪೂತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿವಂಗತ ನಟನ ಸಾವಿನ ತನಿಖೆಗಾಗಿ ಮುಂಬೈ ಪೊಲೀಸರು ನ್ಯಾಯಯುತವಲ್ಲ ಎಂದು ಪಾಂಡೆ ಆರೋಪಿಸಿದ್ದರು.