ಕರ್ನಾಟಕ

karnataka

ETV Bharat / bharat

ಚುನಾವಣೆ ಟೈಮ್​​ನಲ್ಲಿ ಸಂಕಷ್ಟ: ಬಿಹಾರ ಡೆಪ್ಯುಟಿ ಸಿಎಂ ಸುಶೀಲ್​ ಕುಮಾರ್​ ಮೋದಿಗೆ ಕೊರೊನಾ!

ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿಗೆ ಕೊರೊನಾ ಪಾಸಿಟಿವ್​ ಕಂಡು ಬಂದಿದ್ದು, ಪಾಟ್ನಾ ಏಮ್ಸ್​ಗೆ ದಾಖಲಾಗಿದ್ದಾರೆ.

Bihar deputy CM Sushil Kumar Modi
Bihar deputy CM Sushil Kumar Modi

By

Published : Oct 22, 2020, 5:09 PM IST

ಪಾಟ್ನಾ:ಬಿಹಾರದಲ್ಲಿ ಚುನಾವಣೆ ಕಣ ರಂಗೇರಿದ್ದು, ಎಲ್ಲ ಅಭ್ಯರ್ಥಿಗಳು ಕಣಕ್ಕಿಳಿದು ಮತಯಾಚನೆ ಮಾಡುವ ಕೆಲಸದಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಅಲ್ಲಿನ ಉಪ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿಗೆ ಕೊರೊನಾ ಸೋಂಕು ತಗುಲಿದೆ.

ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್​ನಲ್ಲಿ ಸುಶೀಲ್​ ಕುಮಾರ್​ ಮೋದಿ ಮಾಹಿತಿ ಹಂಚಿಕೊಂಡಿದ್ದು, ಆಲ್​ ಇಂಡಿಯಾ ಇನ್ಸ್​ಟ್ಯೂಟ್​​ ಆಫ್​​ ಮೆಡಿಕಲ್​ ಸೈನ್ಸ್​(AIIMS) ಪಾಟ್ನಾದಲ್ಲಿ ಚಿಕಿತ್ಸೆಗೋಸ್ಕರ ದಾಖಲಾಗಿದ್ದಾರೆ.

ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ. ಕಳೆದ ಎರಡು ದಿನಗಳಿಂದ ಸ್ವಲ್ಪ ಮಟ್ಟದ ತೊಂದರೆ ಕಾಣಿಸಿಕೊಂಡಿದ್ದು, ಅದೇ ಕಾರಣಕ್ಕಾಗಿ ಏಮ್ಸ್​ಗೆ ತೆರಳಿದ್ದೇನು. ಶ್ವಾಸಕೋಸದ ಸಿಟಿ ಸ್ಕ್ಯಾನ್​ ಮಾಡಿಸಲಾಗಿದ್ದು, ಯಾವುದೇ ತೊಂದರೆ ಇಲ್ಲ. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಬಿಹಾರದಲ್ಲಿ ಈಗಾಗಲೇ ಚುನಾವಣೆ ಕಣ ರಂಗೇರಿರುವ ಕಾರಣ ಕಳೆದ ಭಾನುವಾರ ಸುಶೀಲ್ ಕುಮಾರ್ ಮೋದಿ, ಅಲ್ಲಿನ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಜತೆ ಬಕ್ಸಾರ್​ ಹಾಗೂ ಭೋಜಪುರ್​ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು.

ಬಿಹಾರದಲ್ಲಿ ಸದ್ಯ 2,08,000 ಕೋವಿಡ್​ ಕೇಸ್​ಗಳಿದ್ದು, 1,96,208 ಡಿಸ್ಚಾರ್ಜ್​​ ಹಾಗೂ 11,010 ಸಕ್ರಿಯ ಪ್ರಕರಣಗಳಿದ್ದು, 1,019 ಜನರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details