ಪಾಟ್ನಾ (ಬಿಹಾರ):ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ನಿತೇಶ್ ಕುಮಾರ್ ನೇತೃತ್ವದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿದೆ ಬಿಜೆಪಿ. ನಿನ್ನೆಯಷ್ಟೇ ಬಿಜೆಪಿ ಹಾಗು ಜೆಡಿಯು ನಡುವೆ ಸೀಟು ಹಂಚಿಕೆ ಕಾರ್ಯ ಯಾವುದೇ ತಕರಾರಿಲ್ಲದೆ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲೀಗ ಪಕ್ಷಾಂತರ ಪರ್ವವೂ ಶುರುವಾಗಿದೆ. ರಾಜ್ಯದ ಪ್ರಸಕ್ತ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಎಲ್‌ಜೆಪಿ ಸ್ವತಂತ್ರವಾಗಿ ಕಣಕ್ಕಿಳಿದು ಸ್ಪರ್ಧಿಸಲು ತೀರ್ಮಾನಿಸಿದೆ. ಇವತ್ತು ಬಿಜೆಪಿಯ ಮಾಜಿ ಶಾಸಕಿ ಉಷಾ ವಿದ್ಯಾರ್ಥಿ ಲೋಕಜನಶಕ್ತಿ (ಎಲ್‌ಜೆಪಿ) ಪಕ್ಷ ಸೇರ್ಪಡೆಗೊಂಡಿದ್ದಾರೆ.
ಆರ್ಎಸ್ಎಸ್ನಲ್ಲಿ ಗುರುತಿಸಿಕೊಂಡಿದ್ದ, ಬಿಜೆಪಿಯ ಹಿರಿಯ ನಾಯಕ ರಾಜೇಂದ್ರ ಸಿಂಗ್ ನಿನ್ನೆಯಷ್ಟೇ ಎಲ್ಜೆಪಿಗೆ ಸೇರಿದ್ದರು. ಇಂದು ವಿದ್ಯಾರ್ಥಿ ಕೂಡ ಪಾಸ್ವಾನ್ ಪಕ್ಷ ಸೇರಿರೋದು ಬಿಜೆಪಿಗೆ ಹಿನ್ನಡೆಯಾಗಿದೆ. ಉಷಾ ವಿದ್ಯಾರ್ಥಿ ಪಾಲಿಗಂಜ್ ಕ್ಷೇತ್ರದಿಂದ ಜೆಡಿಯು ವಿರುದ್ಧ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.