ಕರ್ನಾಟಕ

karnataka

ETV Bharat / bharat

ರಾಮ್ ವಿಲಾಸ್ ಪಾಸ್ವಾನ್ ಇಲ್ಲದೇ ನಡೆಯಲಿದೆ ಬಿಹಾರ ಚುನಾವಣೆ

ಈ ಬಾರಿಯ ಬಿಹಾರ ಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ಕೊರತೆ ಎದ್ದು ಕಾಣಲಿದೆ. ಅವರ ಮಗ ಚಿರಾಗ್ ಪಾಸ್ವಾನ್ ಚುನಾವಣೆಯಲ್ಲಿ ಹಿಡಿತ ಸಾಧಿಸಬಹುದೇ ಎಂಬ ಪ್ರಶ್ನೆಗಳು ಉದ್ಭವಿಸಿದೆ.

RAM VILAS PASWAN
RAM VILAS PASWAN

By

Published : Oct 9, 2020, 3:04 PM IST

ಬಿಹಾರ: ಪ್ರವಾಹ ಮತ್ತು ಉಲ್ಬಣಗೊಳ್ಳುವ ಕೋವಿಡ್-19 ಪರಿಸ್ಥಿತಿಯ ಮಧ್ಯೆಯೂ ಮುಂದಿನ ವಾರದಲ್ಲಿ ಬಿಹಾರ ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧವಾಗಿದೆ. ಕೋವಿಡ್ ಪ್ರಾರಂಭವಾದ ಬಳಿಕ ಮತದಾನ ನಡೆಸಲು ಸಿದ್ಧವಾಗಿರುವ ಭಾರತದ ಮೊದಲ ರಾಜ್ಯ ಇದಾಗಿದೆ.

ಆದರೆ ಈ ಬಾರಿಯ ಬಿಹಾರ ಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ಕೊರತೆ ಎದ್ದು ಕಾಣಲಿದೆ. ಅವರ ಮಗ ಚಿರಾಗ್ ಪಾಸ್ವಾನ್ ಚುನಾವಣೆಯಲ್ಲಿ ಹಿಡಿತ ಸಾಧಿಸಬಹುದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಬಿಹಾರದ ಜನಸಂಖ್ಯೆಯ 1/5ಕ್ಕಿಂತ ಕಡಿಮೆ ಜನ ಮೇಲ್ಜಾತಿಯವರಾಗಿದ್ದು, ಅವರಲ್ಲಿ ಬಹುಪಾಲು ಜನ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ರಾಜ್ಯದ ಜನಸಂಖ್ಯೆಯ 1/3ರಷ್ಟಿರುವ ಬಹುಪಾಲು ಯಾದವರು ಮತ್ತು ಮುಸ್ಲಿಮರ ಬೆಂಬಲವನ್ನು ಆರ್​ಜೆಡಿ ಪಕ್ಷ ಪಡೆಯುತ್ತಿದೆ.

ಈ ಎರಡೂ ಪಕ್ಷಗಳು ಅಸಮಾನ ಸ್ಪರ್ಧೆ ಹೊಂದಿದ್ದು, ಉಳಿದ ಜಾತಿಗಳು ಕೂಡಾ ಪಕ್ಷವೊಂದು ಅಧಿಕಾರ ವಹಿಸುವಲ್ಲಿ ಪಾತ್ರ ವಹಿಸುತ್ತವೆ. ಕುರ್ಮಿಸ್ ಮತ್ತು ಕೊಯೆರಿಸ್‌ನಂತಹ ಯಾದವ್ ಒಬಿಸಿ (ಇತರ ಹಿಂದುಳಿದ ವರ್ಗಗಳು), ಇಬಿಸಿ (ಅತ್ಯಂತ ಹಿಂದುಳಿದ ವರ್ಗಗಳು) ನಿಶಾದ್, ನಾಯಕಹರ್, ಮಂಡಲ್, ಪಾಸ್ವಾನ್, ಮುಸಹರ್ ಮತ್ತು ಚಾಮರರಂತಹ ಮಹಾದಾಲಿತರು ಮತದಾನದ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ (ಎಲ್​ಜೆಪಿ) ಪಾಸ್ವಾನ್ ಜಾತಿಯವರು ಬದ್ಧರಾಗಿದ್ದಾರೆ. ಪಾಸ್ವಾನ್ ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿದ್ದು, ಬಲಿಷ್ಠ ದಲಿತ ನಾಯಕ ಎಂದು ಗುರುತಿಸಿಕೊಂಡಿದ್ದಾರೆ.

ಬಿಹಾರದಲ್ಲಿ ದಲಿತರು ಶೇ 22ರಷ್ಟು ಮತ ಬ್ಯಾಂಕ್ ಹೊಂದಿದ್ದು, ಅದರಲ್ಲಿ ಶೇ 6 ಪಾಸ್ವಾನ್​ಗಳಾಗಿದ್ದು ಅವರು ಮಾತ್ರ ರಾಮ್ ವಿಲಾಸ್ ಪಕ್ಷದ ಪಕ್ಕಾ ಬೆಂಬಲಿಗರು ಎಂದು ನಂಬಲಾಗಿದೆ. ಆರ್‌ಜೆಡಿಗೆ ಹೋಲಿಸಿದರೆ ಎಲ್​ಜೆಪಿಯ ಸಾಂಸ್ಥಿಕ ಉಪಸ್ಥಿತಿಯು ಅತ್ಯಲ್ಪವಾಗಿರುವುದು ಚಿರಾಗ್ ಪಾಸ್ವಾನ್​ಗೆ ಅನಾನುಕೂಲವಾಗಿದೆ.

ಚಿರಾಗ್​ಗೆ ಕೂಡ ಇದು ರಾಜಕೀಯ ಪರೀಕ್ಷೆಯಾಗಲಿದೆ. ನವೆಂಬರ್ 2019ರಲ್ಲಿ ಎಲ್​ಜೆಪಿಯ ಆಡಳಿತ ಅಧಿಕಾರವನ್ನು ಅವರಿಗೆ ಹಸ್ತಾಂತರಿಸಲಾಯಿತು. ಸೀಟು ಹಂಚಿಕೆ ಬಗ್ಗೆ ಎನ್‌ಡಿಎಯಲ್ಲಿ ಪ್ರಸ್ತುತ ಗಲಾಟೆ ನಡೆಯುತ್ತಿದ್ದು, ಚಿರಾಗ್ ಪಾಸ್ವಾನ್ ಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸಲು ನಿರ್ಧರಿಸಿದರೆ ಅವರ ಸವಾಲು ಹೆಚ್ಚಾಗಲಿದೆ.

ABOUT THE AUTHOR

...view details