ಕತಿಹಾರ್ (ಬಿಹಾರ):ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಹುಡುಗ ಮತ್ತು ಹುಡುಗಿಯ ಪ್ರೀತಿ ವಿಚಾರವನ್ನು ಬಿಹಾರದ ಕತಿಹಾರ್ ಜಿಲ್ಲೆಯ ದಂಡಖೋರಾ ಪೊಲೀಸ್ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರ ಗುಂಪೊಂದು ವಿರೋಧಿಸಿ, ರಾಡ್ನಿಂದ ಹಲ್ಲೆ ಮಾಡಿ ರಸ್ತೆಯಲ್ಲಿ ಅಮಾನವೀಯವಾಗಿ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಯುವಕನೋರ್ವ ತನ್ನ ಗೆಳತಿಯನ್ನು ಗ್ರಾಮದಲ್ಲಿ ಭೇಟಿಯಾಗಲು ಹೋದ ಸಂದರ್ಭ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಯುವತಿಯ ಗ್ರಾಮಸ್ಥರು ಈ ಜೋಡಿಯ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ತುಣುಕನ್ನು ವೈರಲ್ ಮಾಡುವುದಾಗಿ ಹಲ್ಲೆಕೋರರು ಬೆದರಿಕೆ ಹಾಕಿ ಯುವಕನ ಎದುರೇ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಈ ಜೋಡಿಯ ಬೆತ್ತಲೆ ವಿಡಿಯೋ ಮಾಡಿದ್ದಾರೆ.