ಪಾಟ್ನಾ: ಕೊರೊನಾ ಸುಳಿಯಲ್ಲಿ ಬಿಹಾರ ಬಿಜೆಪಿ ಸಿಲುಕಿದ್ದು, ಬರೋಬ್ಬರಿ 75 ಕಮಲ ನಾಯಕರಿಗೆ ಸೋಂಕು ತಗುಲಿರುವುದು ದೃಢವಾಗಿದೆ.
ಬಿಹಾರದಲ್ಲಿ 'ಕಮಲ'ಕ್ಕೆ ಕೊರೊನಾ ಶಾಕ್... ಸಚಿವರು ಸೇರಿ 75 ನಾಯಕರಿಗೆ ಅಂಟಿದ ಸೋಂಕು! - ಕೊರೊನಾ ಸುಳಿಯಲ್ಲಿ ಬಿಹಾರ ಬಿಜೆಪಿ
ಬಿಹಾರದ 100 ಮಂದಿ ಬಿಜೆಪಿ ನಾಯಕರ ಗಂಟಲು ದ್ರವದ ಮಾದರಿಗಳನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಇವರಲ್ಲಿ 75 ಮಂದಿಯ ವರದಿ ಪಾಸಿಟಿವ್ ಬಂದಿದೆ.
ಬಿಹಾರದಲ್ಲಿ 'ಕಮಲ'ಕ್ಕೆ ಕೊರೊನಾ
ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ನಾಥ್, ಸಚಿವ ದಿನೇಶ್ ಕುಮಾರ್, ರಾಜೇಶ್ ವರ್ಮಾ, ರಾಧಾ ಮೋಹನ್ ಶರ್ಮಾ ಸೇರಿದಂತೆ 75 ಬಿಜೆಪಿ ನಾಯಕರ ಕೋವಿಡ್ ವರದಿ ಇಂದು ಪಾಸಿಟಿವ್ ಬಂದಿದೆ.
ಒಟ್ಟು 100 ಮಂದಿ ಬಿಜೆಪಿ ನಾಯಕರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.